Friday, June 19, 2026
spot_imgspot_img
spot_imgspot_img

ಕಡಬ: ಕೆರೆಗೆ ಬಿದ್ದು ಮಹಿಳೆ ಮೃತ್ಯು

- Advertisement -
- Advertisement -

ಕಡಬ: ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದಾಗ ಮಹಿಳೆ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಡಬದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಐತ್ತೂರು ನಿವಾಸಿ ಲಿಂಗಪ್ಪ ಗೌಡ ಅವರ ಪತ್ನಿ ಜಾನಕಿ (60) ಎಂದು ಗುರುತಿಸಲಾಗಿದೆ.

(ಸೆ.12) ಮಧ್ಯಾಹ್ನ ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದ ಜಾನಕಿ ಅವರು ಸಂಜೆ 6 ಗಂಟೆಯಾದರೂ ಮರಳಿ ಬಾರದೇ ಇದ್ದುದರಿಂದ ಲಿಂಗಪ್ಪ ಗೌಡರು ಪತ್ನಿಯನ್ನು ಹುಡುಕಿಕೊಂಡು ತೋಟದ ಬಳಿಗೆ ಹೋದಾಗ ಕೆರೆಯ ನೀರಿನಲ್ಲಿ ಜಾನಕಿ ಅವರ ಚಪ್ಪಲಿಗಳು ತೇಲುತ್ತಿರುವುದು ಕಂಡು ಬಂದಿತು.

ಬಳಿಕ ಸ್ಥಳಿಯರ ಸಹಾಯದಿಂದ ನೀರಿನಲ್ಲಿ ಮುಳುಗಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ ಎನ್ನಲಾಗಿದೆ. ಘಟನೆ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!