



ವಿಟ್ಲ ಎರಡು ಸಾವಿರ ಸೇಮೆಯ ವಿಟ್ಲ ಪಡ್ನೂರು ಗ್ರಾಮದ ಕಡಂಬು ಶ್ರೀ ಕಲ್ಕುಡ ಕಲ್ಲುರ್ಟಿ ಮತ್ತು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವದಿ ’’ಆಟಿ ಅಗೇಲು ಸೇವೆಯು’’ ಆಗಸ್ಟ್ 16-8-2025ನೇ ಶನಿವಾರರಂದು ನಡೆಯಲಿದೆ.
ಭಕ್ತಾದಿಗಳು 1 ಸೇರು ಅಕ್ಕಿ ,1 ತೆಂಗಿನಕಾಯಿ , 1 ಕೋಳಿ , ಬಾಳೆ ಎಲೆಗಳನ್ನು ಸಮರ್ಪಿಸಿ, ಇದನ್ನು ಸೂರ್ಯೋದಯಕ್ಕೆ ಅನ್ನದ ಕೊಪ್ಪರಿಗೆಯನ್ನು ಏರಿಸಿ ಕೋಳಿ ಬಂಟ ಮಾಡಿ ಅಡುಗೆಯನ್ನು ತಯಾರಿಸಿ ದೈವಕ್ಕೆ ನೈವೇದ್ಯವನ್ನು ಬಡಿಸಿ ಈ ಪ್ರಸಾದವನ್ನು ಭಕ್ತಾದಿಗಳಿಗೆ ಅಗೇಲು ರೂಪವಾಗಿ ಕೊಡುತ್ತಾರೆ. ಇದಕ್ಕೆ ಅಗೇಲು ಸೇವೆಯೆಂದು ಹೇಳುತ್ತಾರೆ.
ಅನಾದಿಕಾಲದಿಂದಲು ಈ ಸೇವೆಯು ನಿರಂತರವಾಗಿ ವಿಜೃಂಭಣೆಯಿಂದ ನಡೆದು ಬಂದಿರುತದೆ. ಈ ಪರ್ವ ದಿನದಂದು ದೈವಕ್ಕೆ ಅಗೇಲು ಕೊಟ್ಟಲ್ಲಿ ಭಕ್ತರ ಇಷ್ಟಥಗಳನ್ನು ಈಡೇರುತ್ತದೆ ಎಂದು ಭಕ್ತರ ಭವನಗಳು, ಈ ದಿನದಂದು ಕ್ಷೇತ್ರಕ್ಕೆ ಸಾವಿರರು ಕೋಳಿಗಳು ಹರಕೆ ರೂಪದಲ್ಲಿ ಬರುತ್ತದೆ. ಪರಂಪರೆಯಂತೆ ದೈವಗಳ ಅಪ್ಪಣೆಯನ್ನು ಪಡೆದು ಅಗೇಲು ಸೇವೆಗೆ ಊರಿನ ಪ್ರತಿಯೊಂದು ಗ್ರಾಮಸ್ಥರು ಸೇವಕರಾಗಿ ಬಂದು ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಾಹಿಸಿ ಶ್ರೀ ದೈವ-ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೈವಸ್ಥಾನದ ಆಡಳಿತದಾರರು ಮತ್ತು ಊರಿನ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








