Wednesday, July 22, 2026
spot_imgspot_img
spot_imgspot_img

ಕಡಪ: ತಿರುಪತಿ ದೇವಸ್ಥಾನಕ್ಕೆ ತುಪ್ಪ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿ

- Advertisement -
- Advertisement -

ಕಡಪ: ತಿರುಮಲ ತಿರುಪತಿ ದೇವಸ್ಥಾನಕ್ಕೆ ತುಪ್ಪ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಸಂಭವಿಸಿದೆ.

ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆಯ ಬಳಿ ಈ ಅಪಘಾತ ನಡೆದಿದ್ದು, ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ಸುಮಾರು 21,000 ಲೀಟರ್ ತುಪ್ಪವನ್ನು ಈ ಟ್ಯಾಂಕ‌ರ್ ಹೊತ್ತು ಸಾಗಿಸುತ್ತಿತ್ತು.

ಕೂಡಲೇ ಗಮನಿಸಿದ ಸ್ಥಳೀಯರು ತಂಡೋಪತಂಡವಾಗಿ ಜಮಾಯಿಸಿ, ಟ್ಯಾಂಕರ್‌ನಿಂದ ಸೋರುತ್ತಿದ್ದ ತುಪ್ಪವನ್ನು ತುಂಬಿಸಿಕೊಳ್ಳಲು ಜನರು ಬಕೆಟ್, ಕೊಡ, ಬಾಟಲಿ ಮತ್ತು ಡ್ರಮ್‌ಗಳೊಂದಿಗೆ ಮುಗಿಬಿದ್ದರು.

ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹೆಚ್ಚಿನ ಪ್ರಮಾಣದ ತುಪ್ಪವನ್ನು ಜನರು ಹೊತ್ತೊಯ್ದಿದ್ದರು. ಟ್ಯಾಂಕರ್‌ನಲ್ಲಿದ್ದ ಒಟ್ಟು ತುಪ್ಪದಲ್ಲಿ ಕೇವಲ 500 ಲೀಟರ್ ಮಾತ್ರ ಉಳಿದಿದೆ ಎಂದು ವರದಿಯಾಗಿರುವುದು ತಿಳಿದುಬಂದಿದೆ.

- Advertisement -

Related news

error: Content is protected !!