ಹಿಂದೂ ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀ ರಾಮ ಭಜನಾ ಮಂದಿರ ಪ್ರತಾಪನಗರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಬೆಳಕಿನ ಹಬ್ಬ, ಗೋಪೂಜೆ, ತುಳಸಿ ಪೂಜೆ, ಭಾರತಮಾತಾ ಪೂಜನಾ, ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭ 14/11/20 ನೇ ಆದಿತ್ಯವಾರ ಎಲ್ಲರ ಕಣ್ಮನ ಸೆಳೆಯಿತು.

ಸುತ್ತಲೂ ನೂರಾರು ಹಣತೆಗಳು.ತೂಗುಯ್ಯಾಲೆಯಲ್ಲಿ ವಿರಾಜಮಾನಳಾಗಿದ್ದ ಭಾರತಾಂಭೆ,ಪೂಜನೀಯ ಗೋಮಾತೆಯ ಪೂಜೆ, ತುಳಸಿಪೂಜೆ, ಧರ್ಮ ಸಭೆ, ಸನ್ಮಾನ ಸಮಾರಂಭ ಬಹಳ ಚೊಕ್ಕವಾಗಿ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಶಾರದಾ ದಾಮೋದರ ಆಚಾರ್ಯ ವಹಿಸಿಕೊಂಡಿದ್ದರು. ವಾಗ್ಮಿ ಧಾರ್ಮಿಕ ಚಿಂತಕ ಶ್ರೀಕೃಷ್ಣ ಉಪಾಧ್ಯಾಯರ ಸಮಯೋಚಿತ ಭಾಷಣದ ಜೊತೆಗೆ ಕರ್ನಾಟಕ ಕ್ರೀಡಾರತ್ನ ಕಡೇಶಿವಾಲಯದ ಪ್ರತಿಭೆ ಕು.ಜಯಲಕ್ಷ್ಮಿ ರವರನ್ನು ಸನ್ಮಾನಿಸಲಾಯಿತು.

ಸಂಪೂರ್ಣ ಕಾರ್ಯಕ್ರಮ ಕೇವಲ ದೀಪದ ಬೆಳಕಿನಿಂದ ನಡೆದಿದ್ದು ಎಲ್ಲರನ್ನೂ ದೀಪಾವಳಿಯ ಹೊಸ ಲೋಕಕ್ಕೆ ಕರೆದೊಯ್ದಿತು.ಸುಮಾರು ಇನ್ನೂರಕ್ಕೂ ಅಧಿಕ ಕಾರ್ಯಕರ್ತರ ಜೊತೆ ಊರ ಪ್ರಮುಖರು ಹಾಗೂ ಹಿರಿಯರು ಭಾಗವಹಿಸಿದ್ದರು.

ಹಿಂ.ಜಾ.ವೇ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ್ ಎಲ್ಲರನ್ನೂ ಸ್ವಾಗತಿಸಿದರು.ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಭಾಸ್ಕರ ಮುಂಡಾಲ ಧನ್ಯವಾದ ಸರ್ಮರ್ಪಿದ್ದರು. ದುರ್ಗಾಪ್ರಸಾದ್ ಅಮೈ ಕಾರ್ಯಕ್ರಮವನ್ನು ನಿರೂಪಿಸಿದರು.

