ಬಂಟ್ವಾಳ:- ಯುವಶಕ್ತಿ ಕಡೇಶಿವಾಲಯ ಆಶ್ರಯದಲ್ಲಿ ಪ್ರಧಾನಮಂತ್ರಿ ಮೋದೀಜಿಯವರ ಜನ ಆರೋಗ್ಯ ಯೋಜನೆಯ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಪೆರ್ಲಾಪು ಶಾಲಾವಠಾರದಲ್ಲಿ ನಡೆಯಿತು.

ಬೆಳಗ್ಗೆ 9ಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭ ನೆರವೇರಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು
ದೇವಪ್ಪ ಪೂಜಾರಿ (ಅಧ್ಯಕ್ಷರು ಬಂಟ್ವಾಳ ವಿಧಾನಸಭಾ ಕ್ಷೇತ್ರ)ವಹಿಸಿಕೊಂಡಿದ್ದರು. ಆಯುಷ್ಮಾನ್ ಕಾರ್ಡ್ ವಿತರಣೆಯನ್ನು ರಾಜೇಶ್ ನಾಯ್ಕ್ ಬಂಟ್ವಾಳ ಶಾಸಕರು ನೆರವೇರಿಸಿದರು. ಪುರುಷೋತ್ತಮ ಶೆಟ್ಟಿ ನಡ್ಯೇಲು(ಯಮುನಾ ಗ್ರೂಪ್ಸ್ ಮಂಗಳೂರು) ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.


ಅಭ್ಯಾಗತರಾಗಿ ಶ್ರೀ ಹರಿಕೃಷ್ಣ ಬಂಟ್ವಾಳ (ಅಧ್ಯಕ್ಷರು ಕಿಯೋನಿಕ್ಸ್) ,ಕಮಲಾಕ್ಷಿ ಕೆ. ಪೂಜಾರಿ (ಗೋಳ್ತಮಜಲು ಜಿಲ್ಲಾ ಪಂಚಾಯತ್ ಸದಸ್ಯರು) ರಮಾನಾಥ ರಾಯಿ (ಗೋಳ್ತಮಜಲು ಶಕ್ತಿ ಕೇಂದ್ರದ ಅಧ್ಯಕ್ಷರು) ದಿನೇಶ್ ಅಮ್ಟೂರು (ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು) ಪುಷ್ಪರಾಜ ಚೌಟ (ಅಧ್ಯಕ್ಷರು, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘ.) ಶ್ಯಾಮಲ ಶೆಟ್ಟಿ, ಚಿನ್ನಯಕಟ್ಟೆ, (ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು)
ಗಣೇಶ್ ಶೆಟ್ಟಿ ಮಾಣಿ, ವಿದ್ಯಾಧರ ರೈ, ಕೀರ್ತನಾ ನಿಲಯ (ಗೌರವಾಧ್ಯಕ್ಷರು ಯುವಶಕ್ತಿ ಕಡೇಶಿವಾಲಯ(ರಿ)
ಸುರೇಶ್ ಕನ್ನೊಟ್ಟು (ಮಾಜಿ ಪಂಚಾಯತ್ ಸದಸ್ಯರು)
ಶವೀನ್ (ಸಿ.ಎಸ್.ಸಿ. ಜಿಲ್ಲಾ ಪ್ರಬಂಧಕರು)
ಶರತ್ ಬಿ ಶೆಟ್ಟಿ ( ಹಿಂದು ಜಾಗರಣ ವೇದಿಕೆ ತಾಲೂಕು ಪ್ರಚಾರಕ್) ಭಾಸ್ಕರ ಮುಂಡಾಲ (ಅಧ್ಯಕ್ಷರು, ಶ್ರೀರಾಮ ಭಜನಾ ಮಂದಿರ, ಪ್ರತಾಪ ನಗರ) ದೇವಿಪ್ರಸಾದ್, ಬೇಂಗದಡಿ (ಅಧ್ಯಕ್ಷರು, ಯುವಶಕ್ತಿ ಕಡೇಶಿವಾಲಯ)
ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ 750ಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ಆಯುಷ್ಮಾನ್ ಭಾರತ್ ಕಾರ್ಡನ್ನು ವಿತರಿಸಲಾಯಿತು. ತಿಲಕ್ ಮುಂಡಾಲ ಇವರು ಸ್ವಾಗತಿಸಿದರು. ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬನಾರಿ ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು.
