Friday, April 19, 2024
spot_imgspot_img
spot_imgspot_img

ಮಂಗಳೂರು ಕದ್ರಿ ಉತ್ತರ ವಾರ್ಡಿನಲ್ಲಿ 50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ‌ ಶಾಸಕ ಕಾಮತ್ ಗುದ್ದಲಿಪೂಜೆ.

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಈಡನ್ ಕ್ಲಬ್ – ಗುಂಡಳಿಕೆಯಿಂದ ಯೆಯ್ಯಾಡಿ ಕುಂಟಲ್ಪಾಡಿ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ರಸ್ತೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ಕುರಿತು ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದರು. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಲೋಕೋಪಯೋಗಿ ಇಲಾಖೆಯ ಮೂಲಕ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಗದ್ದಲಿಪೂಜೆ ನೆರವೇರಿಸಿದ್ದೇವೆ ಎಂದರು.

ಈಡನ್ ಕ್ಲಬ್ ಗುಂಡಳಿಕೆಯಿಂದ ಯೆಯ್ಯಾಡಿ ಕುಂಟಲ್ಪಾಡಿ ವರೆಗೆ 403 ಮೀಟರ್ ಉದ್ದ ಹಾಗೂ 4.5 ಅಗಲದಲ್ಲಿ ಕಾಂಕ್ರೀಟಿನ ರಸ್ತೆ ನಿರ್ಮಾಣವಾಗಲಿದೆ. ಕಾಮಗಾರಿಯ ಸಂದರ್ಬದಲ್ಲಿ ಜನರಿಗೆ ಸ್ವಲ್ಪ ಮಟ್ಟಿನ ಸಮಸ್ಯೆ ಯಾಗಬಹುದು ಆದರೆ ಅಭಿವೃದ್ಧಿಯ ನಿಟ್ಟಿನಲ್ಲಿ ಜನರ ಸಹಕಾರ ಅತೀ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯೆ ಶಕಿಲಾ ಕಾವಾ, ಸ್ಥಾಯಿ ಸಮಿತಿ ಅದ್ಯಕ್ಷರಾದ ಜಗದೀಶ್, ಪೂರ್ಣಿಮಾ, ಕಾರ್ಪೋರೆಟರ್ ವನಿತಾ ಪ್ರಸಾದ್, ಬಿಜೆಪಿ ಮುಖಂಡರಾದ ರೂಪಾ ಡಿ ಬಂಗೇರ, ರಾಮಕೃಷ್ಣ, ಅಜಯ್, ವಿಜಯ್ ಶೆಣೈ, ಪ್ರವೀಣ್,ಪ್ರಸಾದ್ ಆಚಾರ್ಯ, ರವಿಚಂದ್ರ, ಚರಣ್ ಶೆಟ್ಟಿ, ಗಾಯತ್ರಿ, ಲಕ್ಷ್ಮಿ, ಭಾರತಿ, ಚರಣ್ ಕಂಡೆಟ್ಟು, ಸಂತೋಷ್, ಪ್ರಸನ್ನ, ಮಹೇಶ್ ಶೆಟ್ಟಿ, ಅಮಿತ್ ಗುಂಡಳಿಕೆ, ಪುಷ್ಪರಾಜ್ ಜೈನ್, ಚೇತನ್, ಸೀತಾರಾಮ ಶೆಟ್ಟಿ, ಕೂಸಪ್ಪ, ಸುರೇಶ್, ಸಂದೇಶ್, ಹರಿ, ನಾಗೇಶ್ ಸಮನಿ, ಚಂದ್ರ ಶೇಖರ, ದಯಾನಂದ ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!