Thursday, July 23, 2026
spot_imgspot_img
spot_imgspot_img

ಕಾಡುಮಠ ದ.ಕ.ಜಿ‌.ಪಂ. ಹಿರಿಯ ಪ್ರಾಥಮಿಕ ಶಾಲೆಗೆ ಜೆ.ಐ.ಎಚ್ ವಿಟ್ಲ ಶಾಖೆಯ ಮುಖಾಂತರ ಸ್ವಚ್ಚ ನೀರಿನ ಘಟಕ ಕೊಡುಗೆ

- Advertisement -
- Advertisement -

ಬಂಟ್ವಾಳ: ಕೊಳ್ನಾಡು ದ.ಕ.ಜಿ‌.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಡುಮಠ ಶಾಲೆಗೆ ಜೆ.ಐ.ಎಚ್ ವಿಟ್ಲಶಾಖೆಯ ಮುಖಾಂತರ ಕೆ.ಬಾನು ಎಂಬುವವರು ಸ್ವಚ್ಚ ನೀರಿನ ಘಟಕ ಕೊಡುಗೆ ನೀಡಿದರು.

ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಮುಖ್ಯೋಪಾಧ್ಯಾಯಯರು ಕೊಳ್ನಾಡು ಗ್ರಾ.ಪಂಚಾಯತ್ ಉಪಾದ್ಯಕ್ಷ ಕೆ.ಎ.ಅಸ್ಮ ಹಸೈನಾರ್ ಅವರಿಗೆ ಸ್ವಚ್ಚನೀರಿನ ಘಟಕ ನೀಡಲು ಮನವಿ ಸಲ್ಲಿಸಿದ್ದರು.ಮನವಿಗೆ ಸ್ಪಂದಿಸಿ ಸಾಮಾಜಿಕ ಮುಖಂಡರೂ, ಲಯನ್ಸ್ ಕ್ಲಬ್ ವಿಟ್ಲಸಿಟಿ ಇದರ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ ಸಹಕಾರದಿಂದ ಸಂಘ ಸಂಸ್ಥೆಯೊಂದರ ಮುಖಾಂತರ ಸ್ವಚ್ಚನೀರಿನ ಘಟಕವನ್ನು ಇಂದು ಹಸ್ತಾಂತರಿಸಲಾಯಿತು. ಇದರ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿ ನಾಯಕ ಮನ್ವಿತ್ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಕೊಳ್ನಾಡು ಗ್ರಾ.ಪಂಚಾಯತ್ ಅದ್ಯಕ್ಷ ಅಶ್ರಪ್ ಕೆ‌.ಸಾಲೆತ್ತೂರು, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅದ್ಯಕ್ಷ ಆರಿಪ್ ಕರೈ, ಅನುಗ್ರಹ ಕಾಲೇಜು ಟ್ರಸ್ಟಿ ಹೈದರ್ ನೀರ್ಕಜೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಅದ್ಯಕ್ಷ ಶ್ವೇತಾ, ಉಪಾದ್ಯಕ್ಷ ಅಸ್ಮ ಹಸೈನಾರ್, ಕಾಡುಮಠ ಶಾಲೆಯ ಹಳೆವಿದ್ಯಾರ್ಥಿ ಸಂಘದ ಹಪೀಝ್ ಸಾಲೆತ್ತೂರು, ಅನುಗ್ರಹ ಕಾಲೇಜು ಉಪನ್ಯಾಸಕಿ ರಾಬೀಯ, ಶಾಲಾಬಿವೃದ್ದಿ ಸಮಿತಿಯ ಸದಸ್ಯ ಇಕ್ಬಾಲ್ ಬಸಬೆಟ್ಟು, ಖಾದರ್ ಸಾಲೆತ್ತೂರು, ಪೋಷಕರು, ಶಿಕ್ಷಕಿಯರಾದ ಶಶಿ.ಬಿ., ಪುಷ್ಪಾವತಿ, ಕೀರ್ತಿ. ಕೆ, ಧನ್ಯ.ಕೆ., ಗೌರವ ಶಿಕ್ಷಕಿ ಸೆಕಿನ ಸಹಿತ ಪೋಷಕರು ಉಪಸ್ಥಿತಿತರಿದ್ದರು

.ಪ್ರಬಾರ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿ, ಲತಾ ಎಸ್. ಧನ್ಯವಾದಗೈದರು.ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

- Advertisement -

Related news

error: Content is protected !!