- Advertisement -
- Advertisement -
ಮುಂಬೈ(ಅ.29): ಖ್ಯಾತ ನಟಿ ಕಾಜಲ್ ಅಗರ್ವಾಲ್ ನಾಳೆ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ವರ ಉದ್ಯಮಿ ಗೌತಮ್ ಕಿಚ್ಲು. ಮುಂಬೈನಲ್ಲಿ ಮದುವೆ ಸಮಾರಂಭ ನಡೆಯಲಿದೆ.


ಕೊರೋನಾದ ಕಾರಣದಿಂದಾಗಿ ಉಭಯ ಕುಟುಂಬದ ಕೆಲವೇ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಮೆಹಂದಿ ಕಾರ್ಯಕ್ರಮ ಪೂರ್ಣಗೊಂಡಿದೆ. ಮದುವೆ ಸರಳವಾಗಿ ನಡೆಯಲಿದೆ ಎಂದು ಕಾಜಲ್ ಅಗರ್ವಾಲ್ ತಿಳಿಸಿದ್ದಾರೆ.

ಕಾಜಲ್ ಅಗರ್ವಾಲ್ ತೆಲುಗಿನಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ಅವರು ಅಭಿನಯಿಸಿದ್ದ ಮಗಧೀರ ಚಿತ್ರ ಸೂಪರ್ ಹಿಟ್ ಆಗಿತ್ತು.

- Advertisement -








