Saturday, May 4, 2024
spot_imgspot_img
spot_imgspot_img

ಕಲಾ ತಪಸ್ವಿ ಸಾಂಸ್ಕೃತಿಕ ತಂಡಕ್ಕೆ ವರ್ಷದ ಸಂಭ್ರಮ; “ಕಲಾ ಯಶಸ್ವಿ ಸೀಸನ್ 2” ವಿವಿಧ ಸ್ಪರ್ಧೆ

- Advertisement -G L Acharya panikkar
- Advertisement -

ಕಳೆದ ಹತ್ತು ತಿಂಗಳ ಹಿಂದೆ ಆರಂಭವಾಗಿ, ಒಂದಲ್ಲ ಒಂದು ಕಾರ್ಯಚಟುವಟಿಕೆಯ ಮೂಲಕ ಅನೇಕ ಕಲಾಭಿಮಾನಿಗಳ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿರುವ “ಕಲಾ ತಪಸ್ವಿ ಸಾಂಸ್ಕೃತಿಕ ತಂಡ ಇದೀಗ ಒಂದು ವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ.

ಕಲಾ ತಪಸ್ವಿ ತಂಡವು ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟ ತಂಡ. ಸುಮಾರು 40 ಬಹುಮುಖ ಪ್ರತಿಭೆಗಳನ್ನೊಳಗೊಂಡ ಈ ತಂಡದಲ್ಲಿ ಸಂಗೀತ, ನೃತ್ಯ, ಜಾದು, ಮಿಮಿಕ್ರಿ, ಪ್ರಹಸನ, ಶ್ಯಾಡೋಪ್ಲೇ, ಹೀಗೆ ವಿವಿಧ ಕಲಾಪ್ರಕಾರಗಳನ್ನು ಪ್ರತಿಭೆಗಳು ತೋರ್ಪಡಿಸಿ ಈಗಾಗಲೇ ಹಲವು ವೇದಿಕೆಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಪ್ರತಿಭೆಗಳಿಗೆ ಹೊಸ ಅವಕಾಶ ಕಲ್ಪಿಸಿ ಅವರ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾತಪಸ್ವಿ ತಂಡ ಒಂದು ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಇದೀಗ ಮತ್ತೊಂದು ಹೊಸತನದತ್ತ ಹೆಜ್ಜೆ ಹಾಕಿದೆ. ಅದೇ ”ಕಲಾ ಯಶಸ್ವಿ”.ಮಕ್ಕಳಿಗೆ, ಹಾಗೂ ಸಾರ್ವಜನಿಕರಿಗೆ ಸಂಗೀತ, ನೃತ್ಯ, ರಂಗೋಲಿ ಮತ್ತು ನ್ಯೂಸ್ ರೀಡಿಂಗ್ ಹೀಗೆ ನಾಲ್ಕು ಕಲಾಪ್ರಕಾರಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಬಹುಮಾನದ ರೂಪವಾಗಿ ನಗದು, ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಗುವುದು.

ಈ ಎಲ್ಲಾ ಸ್ಪರ್ಧೆಗಳ ನಿಯಮ, ಸ್ಪರ್ಧೆಯ ಭಾಗವಹಿಸುವಿಕೆಯ ಕ್ರಮಗಳನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜೈದೀಪ್ ಅಮೈ 7090615880

- Advertisement -

Related news

error: Content is protected !!