- Advertisement -
- Advertisement -



ಕಲಬುರಗಿ: ಶರಣಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಚಲಿಸುತ್ತಿದ್ದ ರಥವು ನಿಯಂತ್ರಣ ತಪ್ಪಿ ಮಹಿಳೆಯೊಬ್ಬರ ಮೈಮೇಲೆ ಹರಿದು, ಅವರ ಎರಡೂ ಕಾಲುಗಳು ತುಂಡಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಸಂಭವಿಸಿದೆ.
ಅರಳಗುಂಡಗಿ ಗ್ರಾಮದಲ್ಲಿ ಶರಣಬಸವೇಶ್ವರರ ಜಾತ್ರೆಯ ಸಂದರ್ಭ ನಿನ್ನೆ(ಮಾ.8) ಸಂಜೆ ಸುಮಾರು 6 ಗಂಟೆಗೆ ಜಾತ್ರೆಯ ಅಂಗವಾಗಿ ಆರಂಭವಾದ ಶರಣಬಸವೇಶ್ವರ ರಥೋತ್ಸವದ ಸಮಯದಲ್ಲಿ ಭಕ್ತರು ನೆರೆದಿದ್ದರು. ಈ ವೇಳೆ ತಾಂತ್ರಿಕ ದೋಷ ಅಥವಾ ಜನದಟ್ಟಣೆಯಿಂದಾಗಿ ರಥವು ನಿಯಂತ್ರಣ ತಪ್ಪಿ ಅಲ್ಲಿಯೇ ಇದ್ದ ನಾಗಮ್ಮ ಎಂಬ ಮಹಿಳೆಯ ಕಾಲಿನ ಮೇಲೆ ಹರಿದಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳದಲ್ಲಿದ್ದ ಜನರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ನಾಗಮ್ಮಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯು ಆ ಭಾಗದಲ್ಲಿ ಸಂಚಲನ ಮೂಡಿಸಿದ್ದು, ಹಬ್ಬದ ಸಂಭ್ರಮವು ಕ್ಷಣಾರ್ಧದಲ್ಲಿ ಶೋಕವಾಗಿ ಮಾರ್ಪಟ್ಟಿದೆ ಎಂದು ವರದಿಯಿಂದ ತಿಳಿದುಬಂದಿದೆ.
- Advertisement -








