Friday, June 26, 2026
spot_imgspot_img
spot_imgspot_img

ಲಿಫ್ಟ್ ನೀಡುವ ನೆಪದಲ್ಲಿ ಅತ್ಯಾಚಾರ; ಇಮೇಲ್ ದೂರು ಆಧರಿಸಿಕೊಂಡು FIR – ಕಾಮುಕ ಅಂದರ್

- Advertisement -
- Advertisement -

ಕಲಬುರ್ಗಿ: ಬೈಕ್‌ನಲ್ಲಿ ಲಿಫ್ಟ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಸೇಡಂ ತಾಲ್ಲೂಕಿನ ಕುರಕುಂಟಾ ಕ್ರಾಸ್ ಬಳಿ ಈ ಘಟನೆ ಕೆಲ ತಿಂಗಳುಗಳ ಹಿಂದೆಯೂ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ರಾಜ್ಯ ಮಹಿಳಾ ಆಯೋಗಕ್ಕೆ ಆನ್‌ಲೈನ್ ಮೂಲಕ ನೀಡಿದ ದೂರನ್ನು ಆಧರಿಸಿ ಸೇಡಂ ಪೊಲೀಸರು ಸಿಮೆಂಟ್ ಕಂಪನಿಯೊ0ದರ ಗುತ್ತಿಗೆ ನೌಕರ ನಾಗರಾಜ (26) ಎಂಬಾತನನ್ನು ಬಂಧಿಸಿದ್ದಾರೆ.

ಕಳೆದ ಮೇ 24ರಂದು ಅತ್ಯಾಚಾರ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿದ್ದರಿಂದ ತಕ್ಷಣಕ್ಕೆ ದೂರು ನೀಡಿರಲಿಲ್ಲ. ಜುಲೈ 28ರಂದು ಮಹಿಳಾ ಆಯೋಗಕ್ಕೆ ಇ ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಆಯೋಗವು ಈ ವಿಚಾರವನ್ನು ಸೇಡಂ ಪೊಲೀಸರ ಗಮನಕ್ಕೆ ತಂದಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯ ಹೇಳಿಕೆ ಆಧರಿಸಿ ಆ 31ರಂದು ಆರೋಪಿಯನ್ನು ಬಂಧಿಸಿದ್ದಾರೆ.

ಕಚೇರಿಯೊ0ದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮಹಿಳೆ ಸೇಡಂನಿಂದ ಆಟೊ ಮೂಲಕ ಕುರಕುಂಟಾ ಕ್ರಾಸ್ ಬಳಿ ಬಂದಿಳಿದಿದ್ದಾರೆ. ಸಂಜೆ ಬಸ್ ಇಲ್ಲದ ಕಾರಣ, ರಸ್ತೆಯಲ್ಲಿ ಆಕೆಯನ್ನು ಕಂಡ ನಾಗರಾಜ ಸಹಾಯ ಮಾಡುವ ನೆಪವೊಡ್ಡಿ, ಬೈಕ್ ಹತ್ತಿಸಿಕೊಂಡಿದ್ದಾನೆ. ಕೊಂಚ ದೂರ ಹೋದ ಬಳಿಕ ಸೇತುವೆ ಬಳಿ ಮಹಿಳೆಗೆ ಚಾಕು ತೋರಿಸಿ, ಹೆದರಿಸಿ ಸೇತುವೆ ಕೆಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿದ್ದರು.

- Advertisement -

Related news

error: Content is protected !!