



ಕಲ್ಲಡ್ಕ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 1947 ರ ಆಗಸ್ಟ್14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುವ ಮತ್ತು ಕಳೆದಹೋದ ಭಾಗಗಳೆಲ್ಲವನ್ನೂ ಮತ್ತೆ ಒಂದುಗೂಡಿಸುವ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆ.10-8-2025ನೇ ಆದಿತ್ಯವಾರ ಸಂಜೆ 4:00 ಗಂಟೆಗೆ ಉಮಾಶಿವ ದೇವಸ್ಥಾನ ಗೇರುಕಟ್ಟೆ ಕಲ್ಲಡ್ಕದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಬಿ.ಸಿ. ರೋಡ್ ನ್ಯಾಯವಾದಿ ಗಿರೀಶ್ ಮಲಿಯಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀಯ ಭೂ ಸೇನೆ ಯೋಧ ಪ್ರಶಾಂತ್ ಶೆಟ್ಟಿ ಕಡೇಶಿವಾಲಯ ಗೌರವ ಉಪಸ್ಥಿತರಿರುವರು. ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಟೋಲಿ ಸದಸ್ಯ ಅಮಿತ್ ಕುಮಾರ್ ಮಂಗಳೂಎರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 2:30ರಿಂದ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರು ರಾಮದೇವ ಸಭಾಭವನ, ವೀರಕಂಭ ಶಾರದ ಭಜನಾ ಮಂದಿತ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ ನಡೆಯಲಿದೆ ಎಂದು ಸಂಯೋಜಕರು ಮತ್ತು ಸಹಸಂಯೋಜಕರು ಕಾರ್ಯಕಾರಿಣಿ ಸದಸ್ಯರು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಪ್ರಕಟಣೆಯಲ್ಲಿ ತಿಳಿಸಿದೆ.








