Tuesday, July 8, 2025
spot_imgspot_img
spot_imgspot_img

ಕಲ್ಲಡ್ಕ: ಹಿಂ ಜಾ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ

- Advertisement -
- Advertisement -

ಕಲ್ಲಡ್ಕ : ಹಿಂದೂ ಜಾಗರಣ ವೇದಿಕೆ ಕಲ್ಲಡ್ಕದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆ.11 ನೇ ಆದಿತ್ಯವಾರ ನಡೆಯಿತು.

ಮಧ್ಯಾಹ್ನ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರ್‌ ರಾಮದೇವ ಸಭಾಭವನ ಮತ್ತು ವೀರಕಂಭ ಶಾರದಾ ಭಜನಾ ಮಂದಿರ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ ಸಾಗಿ ಬಂದು ಬಳಿಕ ಉಮಾಶಿವ ದೇವಸ್ಥಾನ ಕಲ್ಲಡ್ಕದಲ್ಲಿ ಸಭೆ ನಡೆಯಿತು.

ರಾಕೋಡಿ ಈಶ್ವರ ಭಟ್, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಉಮಾಶಿವ ದೇವಸ್ಥಾನ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ಞಾ ಕಶ್ಯಪ್‌ ಪ್ರಾಂತ ಕಾರ್ಯಕಾರಿಣಿ ಸದಸ್ಯರು, ಹಿ.ಜಾ.ವೇ. ಕರ್ನಾಟಕ ದಕ್ಷಿಣ ದಿಕ್ಸೂಚಿ ಭಾಷಣ ಮಾಡಿದರು.

ಜಯಕುಮಾರ್‌ ಕೆದಿಲ ನಿವೃತ ಯೋಧರು ಎ.ಸಿ.ಪಿ ಹವಲ್ದಾರ್‌ ಭಾರತೀಯ ಭೂಸೇನೆ ಇವರ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ್ ನರಸಿಂಹ ಮಾಣಿ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಹಿ ಜಾ ಪ್ರಮುಖರು ರತ್ನಾಕರ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುಷ್ಪರಾಜ್ ಕಮ್ಮಾಜೆ, ತಾಲೂಕು ಸಂಯೋಜಕ ಹರ್ಷ ವಿಟ್ಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪರಿವಾರ ಸಂಘಟನೆಯ ಹಿರಿಯರು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತಿಲಕ್ ಕಡೆಶಿವಾಲಯ ಸ್ವಾಗತಿಸಿದರು, ಗುರುಪ್ರಿಯಾ ಶಿವಾನಂದ್ ಕಾಮತ್ ವೈಯಕ್ತಿಕ ಗೀತೆ ಹಾಡಿದರು. ಚಿಂತನ್ ವಿನ್ಯಾಸ ಪ್ರತಿಜ್ಞಾ ಭೋಧಿಸಿದರು. ಧನು ಸೆರ್ಕಳ ಧನ್ಯವಾದ ಸಮರ್ಪಿಸಿದರು. ಗಂಗಾಧರ ಗೌಡ ವಂದೇ ಮಾತರಂ ಹಾಡಿ, ದುರ್ಗಾ ಪ್ರಸಾದ್ ಕಡೆಶಿವಾಲಯ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!