Monday, February 10, 2025
spot_imgspot_img
spot_imgspot_img

ಕಲ್ಲಡ್ಕ: ಯಶಸ್ವಿ ದ್ವಿತೀಯ ವರ್ಷಕ್ಕೆ ಪಾದಾರ್ಪಣೆಗೊಂಡ ಸಮುದ್ರ ಫೈನ್‌ ಡೈನ್‌ ರೆಸ್ಟೋರೆಂಟ್‌

- Advertisement -
- Advertisement -

ಸೇವಾರ್ಥವಾಗಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ

ಕಲ್ಲಡ್ಕ: ಸಮುದ್ರ ಫೈನ್‌ಡೈನ್‌ ವೆಜ್‌ ರೆಸ್ಟೋರೆಂಟ್ ತನ್ನ ಸಂಸ್ಥೆ ಕಲ್ಲಡ್ಕ ಪರಿಸರದ ಕುದ್ರೆಬೆಟ್ಟು ಎಂಬಲ್ಲಿ ಯಶಸ್ವಿ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಸಮುದ್ರ ಫೈನ್‌ಡೈನ್‌ ವೆಜ್‌ ರೆಸ್ಟೋರೆಂಟ್ ಸಂಸ್ಥೆಯ ಎರಡನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಗಣಹೋಮ, ಸತ್ಯನಾರಾಯಣ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಸೇವಾರ್ಥವಾಗಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರು ರಾಜೇಶ್‌ ನಾಯಕ್‌ ಉಳಿಪ್ಪಾಡಿಗುತ್ತು, ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ಊರ ಪರವೂರ ಭಕ್ತಾಭಿಮಾನಿಗಳು ಯಕ್ಷಗಾನದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

ಸಮುದ್ರ ಫೈನ್‌ಡೈನ್‌ ವೆಜ್‌ ರೆಸ್ಟೋರೆಂಟ್ ಕಳೆದ ಒಂದು ವರ್ಷದಿಂದ ಕಲ್ಲಡ್ಕ ಪರಿಸರದಲ್ಲಿ ಶುಚಿರುಚಿಯಾದ ವಿವಿಧ ಬಗೆಯ ವೆಜ್‌ ವೈರೈಟೀ ಫುಡ್‌ಗಳನ್ನು ನೀಡುವುದರ ಮೂಲಕ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಯಶಸ್ವಿ ಎರಡನೇ ವರ್ಷದ ಪಾದಾರ್ಪಣೆ ಸಲುವಾಗಿ ಗ್ರಾಹಕರಿಗೆ ಡಿಜಿಟಲ್‌ ಸೇವೆಯನ್ನು ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಸಂಸ್ಥೆಯ ವೈಬ್‌ಸೈಟ್‌ ಅನಾವರಣಗೊಳ್ಳಲಿದೆ. ಈ ಮೂಲಕ ಗ್ರಾಹಕರು ಮನೆಯಲ್ಲೇ ಕೂತು ತಮ್ಮಿಷ್ಟದ ಆಹಾರಗಳನ್ನು ಆನ್‌ಲೈನ್‌ ಮೂಲಕ ತಮ್ಮ ಮನೆಬಾಗಿಲಿದೆ ತರಿಸಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು.

ಮಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್‌ ಸಂಸ್ಥೆ ವಿನ್ಯಾಸ ಸಂಸ್ಥೆ ಈ ವೆಬ್‌ಸೈಟ್‌ನ ಕೆಲಸ ನಿರ್ವಹಿಸಿದ್ದು, ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.

- Advertisement -

Related news

error: Content is protected !!