ಕಲ್ಲಂಗಳ-ಕೇಪು: 2024-25ನೇ ಸಾಲಿನಲ್ಲಿ ಸಂಭ್ರಮ ಶನಿವಾರ, ಆಟಿಯ ಕೂಟ, ಎಸ್.ಡಿ.ಎಂ.ಸಿ ಸಭೆ, ಪೋಷಕರ ಸಭೆ, ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ ಕಾರ್ಯಕ್ರಮವು ಸರಕಾರಿ ಪ್ರೌಢ ಶಾಲೆ ಕಲ್ಲಂಗಳ-ಕೇಪು ಇಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ ವಹಿಸಿದ್ದರು. ಮುಖ್ಯ ಶಿಕ್ಷಕಿ ಮಾಲತಿ ಕೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ರಾಧಾಕೃಷ್ಣ ಆಡಳಿತಾಧಿಕಾರಿಗಳು ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿಟ್ಲ ಇವರು ಆಟಿಯ ಮಹತ್ವದ ಬಗ್ಗೆ ತಿಳುವಳಿಕೆ ನೀಡಿದರು. ಬಾಲಕೃಷ್ಣ ಕಾರಂತರವರು ಮಕ್ಕಳಿಗೆ ಕೊಡೆ ಮತ್ತು ಬ್ಯಾಗ್ ನ್ನು ವಿತರಿಸಿ ಸಮಾಜ ಸೇವೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಗಿರಿಜಾ ಎನ್, ರಂಗಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಪ್ರಕಾಶ್ ರೈ, ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಹಾಗೂ ಪುರುಷೋತ್ತಮ ಗೌಡ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ KARLA DAVID AND COSES PINTO MEMORIAL CHARITABLE TRUST MANGLORE ಇವರು ನೀಡಿದ ವಿದ್ಯಾರ್ಥಿ ವೇತನವನ್ನು ಕೃತಿಕಾ ಇವಳಿಗೆ ವಿತರಿಸಲಾಯಿತು.
ಕಾರ್ಯಕ್ರಮವನ್ನು ಸಹ ಶಿಕ್ಷಕ ಲಕ್ಷ್ಮಣ್ ಟಿ ನಾಯ್ಕ ಸ್ವಾಗತಿಸಿದರು, ಪೂರ್ಣಿಮಾ ಎಸ್.ಕೆ ವಂದಿಸಿದರು. ಸಹ ಶಿಕ್ಷಕ ರಮೇಶ್ ಡಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಎಲ್ಲರೂ ಆಟಿ-ಕೂಟದ ಸವಿಯೂಟದೊಂದಿಗೆ ಸಂಭ್ರಮ ಶನಿವಾರದಲ್ಲಿ ಪಾಲ್ಗೊಂಡರು.