




ಧರ್ಮನಗರ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ.) ಮಲರಾಯ ಜೇರದಲ್ಲಿ ಶ್ರೀ ದೈವಗಳ ಸಾನ್ನಿಧ್ಯವೃದ್ಧಿ ವಾರ್ಷಿಕ ಮಹಾಪರ್ವ ಮತ್ತು ನೇಮೋತ್ಸವವು 23-12-2025ನೇ ಮಂಗಳವಾರದಿಂದ 25-12-2025ನೇ ಗುರುವಾರದವರೆಗೆ ನಡೆಯಲಿದೆ.

ದಿನಾಂಕ: 23-12-2025 ಮಂಗಳವಾರ ಬೆಳಿಗ್ಗೆ 8:00ಕ್ಕೆ ಗಣಪತಿ ಹವನ ನಡೆದು ಬೆಳಿಗ್ಗೆ 9.30 ಕ್ಕೆ ಪುಣ್ಯಾಹ ನಡೆಯಲಿದೆ. 11:00ಕ್ಕೆ ಮಹಾಪರ್ವ ಸೇವೆ ಬಳಿಕ ಮಧ್ಯಾಹ್ನ 1.00ಕ್ಕೆ ಪ್ರಸಾದ ಭೋಜನ ನಡೆಯಲಿದೆ.

ದಿನಾಂಕ 24-12-2025ನೇ ಬುಧವಾರ ಅಪರಾಹ್ನ 2.30ಕ್ಕೆ ಡೆಚ್ಚಾರಿನಲ್ಲಿ ದೈವಗಳಿಗೆ ತಂಬಿಲ ಸೇವೆ ನಡೆಸಿ ಭಂಡಾರ ಹೊರಡುವುದು. ಅಪರಾಹ್ನ 3.30ಕ್ಕೆ ಜೈನರಕೋಡಿಯಲ್ಲಿ ತಂಬಿಲ ಸೇವೆ, ಪಟ್ಟಿ ವಿತರಣೆ ನಡೆಯಲಿದೆ. ಸಂಜೆ 5.30ಕ್ಕೆ ಕುಳಗುತ್ತುವಿನಲ್ಲಿ ದೈವಗಳಿಗೆ ತಂಬಿಲ ಸೇವೆ, ವೈದ್ಯನಾಥ ದೈವದ ಭಂಡಾರ ಹೊರಡುವುದು. ಸಂಜೆ 6.30ಕ್ಕೆ ಉರಿಮಜಲು ನಡುಸಾದಿಯಲ್ಲಿ ದೈವಗಳ ಸಮಾಗಮ, ನುಡಿ, ಅನಂತರ ಭಂಡಾರವು ಜೇರಕ್ಕೆ ತೆರಳುವುದು. ರಾತ್ರಿ 7.30ಕ್ಕೆ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು, 8.30ಕ್ಕೆ ಪ್ರಸಾದ ಭೋಜನದ ಬಳಿಕ 9.30ಕ್ಕೆ ವೈದ್ಯನಾಥ ದೈವದ ನೇಮೋತ್ಸವ, ದೈವದ ಕೆರೆ ಆಯನ, ಸುಡುಮದ್ದು ನಡೆಯಲಿದೆ.

ದಿನಾಂಕ: 25-12-2025ನೇ ಗುರುವಾರ ಬೆಳಿಗ್ಗೆ 11:00ಕ್ಕೆ ಮಲರಾಯ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 8.30ಕ್ಕೆ ಕೊರತ್ತಿ ದೈವದ ನೇಮ ನಡೆದು ಬಳಿಕ 10.30ಕ್ಕೆ ಗುಳಿಗ ದೈವದ ನೇಮ ನಡೆಯಲಿದೆ. ಅಪರಾಹ್ನ 3.30ಕ್ಕೆ ದೈವಗಳ ಭಂಡಾರವು ಜೇರದಿಂದ ಭಂಡಾರದ ಮನೆಗಳಿಗೆ ಹಿಂತಿರುಗುವುದು. ಮಧ್ಯಾಹ್ನ 1:00 ಮತ್ತು ರಾತ್ರಿ 8:00 ಗಂಟೆಗೆ ಪ್ರಸಾದ ಭೋಜನ ನಡೆಯಲಿದೆ.









