Wednesday, May 15, 2024
spot_imgspot_img
spot_imgspot_img

“ಟಾರ್ಚ್ ಬ್ಯಾಟರಿ”ಗಾಗಿ ಹೈಕೋರ್ಟ್ ಮೊರೆ ಹೋದ ಕಮಲ್ ಹಾಸನ್

- Advertisement -G L Acharya panikkar
- Advertisement -

ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ನಟ ಕಮಲ್​ ಹಾಸನ್ ಅವರ ಪಕ್ಷ ಭರದ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ. ಚುನಾವಣೆಗೆ ತಮ್ಮ ಮಕ್ಕಳ್ ನೀದಿ ಮೈಯ್ಯಂ(MNM) ಪಕ್ಷಕ್ಕೆ ಟಾರ್ಚ್​ ಬ್ಯಾಟರಿ ಚಿಹ್ನೆಯಾಗಿ ಪಡೆಯಲು ಕಮಲ್ ಹಾಸನ್ ಮದ್ರಾಸ್​ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ಟಾರ್ಚ್​​ ಬ್ಯಾಟರಿಯನ್ನ MNM ನಮಗೆ ನೀಡಬೇಕು. ಹಾಗೇ MGR ಮಕ್ಕಳ್​ ಕಚ್ಚಿ ಪಕ್ಷ ಈ ಚೆಹ್ನೆಯನ್ನ ಬಳಸದಂತೆ ತಡೆಯಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಮಲ್ ಹಾಸನ್ ಅವರ ಪಕ್ಷ ರಿಟ್​ ಅರ್ಜಿ ಸಲ್ಲಿಸಿದೆ.

ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೂ ಎಂಜಿಆರ್​ ಮಕ್ಕಳ್​ ಕಚ್ಚಿ ಪಕ್ಷಕ್ಕೆ ಟಾರ್ಚ್​​ ಚಿಹ್ನೆ ಸಿಕ್ಕಿದೆ. ಈ ಹಿನ್ನೆಲೆ ಕಮಲ್ ಹಾಸನ್, ಟಾರ್ಚ್​​ ಚಿಹ್ನೆಯನ್ನ ತಮ್ಮದಾಗಿಸಿಕೊಳ್ಳಲು ಹೈಕೋರ್ಟ್​ ಮೊರೆ ಹೋಗಿದ್ದಾರೆ.

- Advertisement -

Related news

error: Content is protected !!