ನವದೆಹಲಿ: ಕರ್ನಾಟಕದಲ್ಲಿ ನಡೆಯುವ ಸಂಪ್ರದಾಯಿಕ ಕ್ರೀಡೆ ಕಂಬಳವನ್ನು ರಾಜ್ಯದಾದ್ಯಂತ ನಡೆಸಲು ಅವಕಾಶ ನೀಡಿದ High Court of Karnataka ಆದೇಶವನ್ನು ಪ್ರಶ್ನಿಸಿ People for the Ethical Treatment of Animals India (ಪೇಟಾ ಇಂಡಿಯಾ) ಸಲ್ಲಿಸಿದ್ದ ಅರ್ಜಿಯನ್ನು Supreme Court of India ತಳ್ಳಿಹಾಕಿದೆ.Special Leave Petition (C) No. 8272/2026 ಪ್ರಕರಣದಲ್ಲಿ ಪೇಟಾ ಇಂಡಿಯಾ, ಕಂಬಳ ಸ್ಪರ್ಧೆಯನ್ನು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಷ್ಟೇ ನಡೆಸಬೇಕು ಎಂದು ವಾದಿಸಿತ್ತು. ಆದರೆ ಈ ವಾದವನ್ನು ಮೊದಲು W.P. No. 18406/2024ರಲ್ಲಿ High Court of Karnataka ತಳ್ಳಿಹಾಕಿ, ಕರ್ನಾಟಕದ ಯಾವುದೇ ಭಾಗದಲ್ಲಿ ಕಂಬಳ ಆಯೋಜಿಸಲು ಅವಕಾಶ ನೀಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ಪೇಟಾ ಇಂಡಿಯಾ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರೂ, ಸುಪ್ರೀಂ ಕೋರ್ಟ್ ಅದನ್ನೂ ತಳ್ಳಿಹಾಕಿರುವುದರಿಂದ ರಾಜ್ಯದಾದ್ಯಂತ ಕಂಬಳ ನಡೆಸಲು ಮತ್ತೊಮ್ಮೆ ನ್ಯಾಯಾಂಗದ ಮುದ್ರೆ ಬಿದ್ದಂತಾಗಿದೆ.ಈ ಪ್ರಕರಣದಲ್ಲಿ Bangalore Kambala Committee ಮತ್ತು District Kambala Committee ಪರವಾಗಿ ವಕೀಲರಾದ ವಿನೋದ್ ಕುಮಾರ್ ಎಂ ವಾದ ಮಂಡಿಸಿದ್ದರು. ನ್ಯಾಯಾಲಯದ ತೀರ್ಪಿನಿಂದ ಕಂಬಳ ಅಭಿಮಾನಿಗಳಲ್ಲಿ ಸಂತಸ ವ್ಯಕ್ತವಾಗಿದೆ.








