Wednesday, June 17, 2026
spot_imgspot_img
spot_imgspot_img

ಕಂಬಳಬೆಟ್ಟು: (ಆ.27-29) ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಆಶ್ರಯದಲ್ಲಿ 54ನೇ ವರ್ಷದ ಮಹಾಗಣೇಶೋತ್ಸವ

- Advertisement -
- Advertisement -

ಗಣಪನಿಗೆ ವಿಶೇಷ ಇಕ್ಷುದಂಡ ಸಮರ್ಪಣೆ ಮತ್ತು ಸಾಮೂಹಿಕ ಏಕಸಹಸ್ರ ಅಷ್ಟಮೋದಕ ಸಮರ್ಪಣೆ

ಕಂಬಳಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಆಶ್ರಯದಲ್ಲಿ 54ನೇ ವರ್ಷದ ಮಹಾಗಣೇಶೋತ್ಸವವು ಆ.27-8-20215ನೇ ಬುಧವಾರದಿಂದ 29-8-20215ನೇ ಶುಕ್ರವಾರದವರೆಗೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ಕಳೆದ 53 ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಈ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಆಚರಣೆಯೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ದಿನಾಂಕ: 27-08-2025ನೇ ಬುಧವಾರ ಪೂ. 8:30ಕ್ಕೆ ಶ್ರೀ ಗಣಪತಿ ಹವನ ಬಳಿಕ ಪೂ. 9:30ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆ ನಡೆಯಲಿದೆ. ಇಡ್ಕಿದು ಸೇವಾ ಸಹಕಾರಿ ಸಂಘ ನಿ ನಿವೃತ್ತ ಸಿ.ಇ.ಓ. ಈಶ್ವರ ನಾಯ್ಕ್‌ ಮಿತ್ತೂರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಗೋವಿಂದ ಭಟ್ ಉರಿಮಜಲು ಉದ್ಘಾಟಿಸಲಿದ್ದಾರೆ. ಪುರೋಹಿತ ವೇ। ಮೂ। ಗೋಪಾಲಕೃಷ್ಣ ಭಟ್. ಮಿತ್ತೂರು ಮೂರ್ತಿ ಪ್ರತಿಷ್ಠೆ ನಡೆಸಲಿದ್ದಾರೆ. ಪೂ. 11:00ಕ್ಕೆ ಇಕ್ಷುದಂಡ (ಕಬ್ಬು) ಸಮರ್ಪಣೆ ವಿಶೇಷ ಪೂಜಾ ಸೇವೆ ಪ್ರಾರಂಭವಾಗಲಿದೆ. (ಇಕ್ಷುದಂಡ ಸಮರ್ಪಣೆಗೆ ಕಬ್ಬು ಕಾರ್ಯಾಲಯದಲ್ಲಿ ಲಭ್ಯವಿರುತ್ತದೆ) ಮಧ್ಯಾಹ್ನ 12-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ. ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಘಂಟೆ 6.00ರಿಂದ ಧರ್ಮನಗರ ಬಾಲಗೋಕುಲ ಮಕ್ಕಳಿಂದ ಭಜನೆ ನಡೆದು ಬಳಿಕ ಸಂಜೆ 7.00ರಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.20ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು 8.30ರಿಂದ ಭಾರತ ದರ್ಶನ – (1) (ಸನಾತನ ಭಾರತದ ಅನಾವರಣ) ಶ್ರೀರಾಮ ವಿದ್ಯಾಸಂಸ್ಥೆ, ಕಲ್ಲಡ್ಕ ಮುಖ್ಯಕಾರನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪನ್ಯಾಸ ನೀಡಲಿದ್ದಾರೆ.

ದಿನಾಂಕ 27-08-2025ನೇ ಬುಧವಾರ ಮಕ್ಕಳಿಗೆ, ಬಾಲಕರಿಗೆ, ಯುವತಿಯರಿಗೆ, ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ.

ಇಲ್ಲಿನ ವಿಶೇಷತೆ ಏನೆಂದರೆ ಪ್ರತೀ ವರ್ಷವೂ ಊರಿನ ಪ್ರತೀ ಮನೆಯಿಂದ ಮಾಡಿ ತಂದ ಪ್ರಸಾದವನ್ನು ಗಣೇಶನಿಗೆ ಮೊದಲ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ.

ದಿನಾಂಕ: 28-08-2025ನೇ ಗುರುವಾರ ಬೆಳಿಗ್ಗೆ 10.00 ರಿಂದ 55 ಕೆ.ಜಿ. ವಿಭಾಗದ ಸಾರ್ವಜನಿಕ ಕಬಡ್ಡಿ ಪಂದ್ಯಾಟ ನಡೆಯಲಿದೆ. ಬಳಿಕ 10:00ರಿಂದ ಗಣಪತಿಗೆ ಸಾಮೂಹಿಕವಾಗಿ ತಯಾರಿಸಿದ ಏಕಸಹಸ್ರ ಅಷ್ಟ ಮೋದಕ ಸಮರ್ಪಣೆ ನಡೆಯಲಿದೆ. (ಮಧ್ಯಾಹ್ನ ಮಹಾಪೂಜೆ ಮೊದಲು ಸಮರ್ಪಿಸುವುದು.) ಮಧ್ಯಾಹ್ನ 12-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4.00ರಿಂದ ಸಹೋದರ ಜನಸೇವಾಟ್ರಸ್ಟ್ (ರಿ.)ಬಾರಬೆಟ್ಟು-ಇವರಿಂದ ಭಜನೆ ನಡೆಯಲಿದೆ. ಸಂಜೆ 6:00ಕ್ಕೆ ಸಾಮೂಹಿಕ ಕುಂಕುಮಾರ್ಚನೆ ನಡೆದು ರಾತ್ರಿ 7:30ಕ್ಕೆ ರಂಗಪೂಜೆ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8.30ಕ್ಕೆ : ಭಾರತ ದರ್ಶನ (2) (ಸದಾತನ ಭಾರತದ ಅನಾವರಣ) ಶ್ರೀರಾಮ ವಿದ್ಯಾಸಂಸ್ಥೆ, ಕಲ್ಲಡ್ಕ ಮುಖ್ಯಕಾರನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪನ್ಯಾಸ ನೀಡಲಿದ್ದಾರೆ.

ದಿನಾಂಕ: 29-08-2025ನೇ ಶುಕ್ರವಾರ ಪೂರ್ವಾಹ್ನ 9:00ಕ್ಕೆ ಪೂಜಾ ಸೇವೆ ಪ್ರಾರಂಭವಾಗಿ ಬಳಿಕ ಪೂ.10:00ಕ್ಕೆ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ, ಹೂಹಾರ ಸ್ಪರ್ಧೆ ನಡೆಯಲಿದೆ. ಅಪರಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.00ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಕೃಷಿಕ, ಅಳಿಕೆಮಜಲು ನಿನ್ನಕಲ್ಲು ನರ್ಸರಿ ಮಾಲಕ ಜಾಕ್ ಅನಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್‍ಯವಾಹ ಪ್ರಕಾಶ್‌ ಪೆ.ಎಸ್‌ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಬಳಿಕ 3.00ಕ್ಕೆ : ಮಹಾ ಮಂಗಳಾರತಿ, ದಿಗ್ವಿಜಯೋತ್ಸವ, ವಂದೇ ಮಾತರಂ, ಮೂರ್ತಿ ಜಲಸ್ತಂಭನಗೊಳ್ಳಲಿದೆ.

ದಿಗ್ವಿಜಯೋತ್ಸವದಲ್ಲಿ ಗಣಪತಿಯ ಭವ್ಯ ಅಲಂಕೃತವಾದ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಚೆಂಡೆ ವಾದನ, ಕುಣಿತ ಭಜನೆ ಟ್ಯಾಬ್ಲೊಗಳು ಮೆರುಗು ನೀಡಲಿದೆ.

ರಾತ್ರಿ 7.30 ರಿಂದ ಜಯದುರ್ಗೆ ಸನ್ನಿಧಿಯಲ್ಲಿ ಭಜನೆ ನಡೆಯಲಿದೆ. ರಾತ್ರಿ 8.00ರಿಂದ ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆ (ರಿ.) ಕಲ್ಲಾರೆ ಪುತ್ತೂರು ಇದರ ಉಪ್ಪಿನಂಗಡಿ ಶಾಖೆ ಇವರಿಂದ “ಕಲಾಗಂಗಾ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!