


ಕಂಬಳಬೆಟ್ಟು: ಹೊಸಮಾರು ಬಂಗೇರ ಕುಟುಂಬಸ್ಥರು ನಂಬಿಕೊಂಡು ಬಂದಿರುವ ಅಷ್ಟಕುಲ ಸರ್ಪ, ರಕ್ತೇಶ್ವರಿ,ಕೊರತಿ, ಭ್ರಹ್ಮಗುರು ಸಾನಿಧ್ಯಗಳ ಪ್ರತಿಷ್ಠಾ ಕಲಶ ನಡೆಯಿತು.
ಈ ಸ್ಥಳದಲ್ಲಿ ಇರುವ ಸಾನಿಧ್ಯ ಶಕ್ತಿಗಳನ್ನು ಪುರಾತನ ಕಾಲಘಟ್ಟದಲ್ಲಿ ಶ್ರೇಷ್ಠ ಋಷಿ ಮುನಿಗಳು ಆರಾಧಿಸುತ್ತಾ ಇದ್ದರು ಎಂಬ ಪ್ರತೀತಿ ಇದೆ. ತದನಂತರ ರಾಜಾಡಳಿತದ ಕಾಲಘಟ್ಟದಲ್ಲಿ ರಾಜರು ಬ್ರಾಹ್ಮಣರ ಮುಖೇನ ಆರಾಧಿಸಿಕೊಂಡು ಬಂದಿರುತ್ತಾರೆ. ಈ ಬ್ರಾಹ್ಮಣ ಕುಟುಂಬಕ್ಕೆ ಸಂಬಂಧಪಟ್ಟ ವ್ಯಕ್ತಿಗೂ, ಅಂಗಾರೆಬೆಟ್ಟು ಕುಟುಂಬ ಪರಂಪರೆಗೂ ಈ ಸರ್ಪಬನವನ್ನು ಮೂಲ ಸರ್ಪಾರಾಧನೆಯ ರೀತಿಯಲ್ಲಿ ಆರಾಧನೆ ಮಾಡಿಕೊಳ್ಳುವ ಅನುಕೂಲವನ್ನು ಗುರುವಾದ ಬ್ರಾಹ್ಮಣರು ನೀಡಿದರು. ತದನಂತರ ಸರ್ವಬನ ಹಾಗೂ ಅದಕ್ಕೆ ಹೊಂದಿಕೊಂಡಿರುವಂತಹ (ಸುಮಾರು 600 ಎಕರೆ) ಭೂ ಪ್ರದೇಶವನ್ನು ರಾಜರು ಈ ಕುಟುಂಬದ ಹಿರಿಯರಿಗೆ ಅನುಭವಿಸಲು ನೀಡಿದ್ದರು. ಈ ಸರ್ಪಬನವನ್ನು ಆರಾಧಿಸುತ್ತಿದ್ದ ಬ್ರಹ್ಮಗುರು ಕಾಲಾನಂತರ ಸಮಾಧಿಯಾದರು. ಹಲವಾರು ವರ್ಷಗಳ ಕಾಲ ಸರ್ಪಾರಾಧನೆ ಮಾಡಿದ ಈ ಕುಟುಂಬದ ಪರಂಪರೆಯವರು ಇದರ ಜೊತೆ ಧರ್ಮದೈವ, ಪರಿವಾರ ದೈವಗಳನ್ನು ಆರಾಧಿಸಿದರು. ನಂತರದ ಕಾಲಘಟ್ಟದಲ್ಲಿ ಕುಟುಂಬದಲ್ಲಿ ಸೃಷ್ಟಿಯಾದ ಭೂಮಿ ವಿಷಯದ ತರ್ಕ ಕಲಹಗಳಿಂದ ಸರ್ಪಾರಾಧನೆ ಮತ್ತು ಧರ್ಮದೈವ ಮತ್ತು ಪರಿವಾರ ದೈವಗಳನ್ನು ಉಪೇಕ್ಷಿಸುವ ರೀತಿಯಲ್ಲಿ ಆಯಿತು. ಈ ನಿಮಿತ್ತಗಳಿಂದ ಹಲವಾರು ದುರಿತ ದೋಷಗಳು ಕಂಡುಬಂತು.ಈ ಅಷ್ಟಕುಲ ಸರ್ಪ ಹಾಗೂ ಸಾನಿಧ್ಯ ಶಕ್ತಿಗಳ ಪೂಜಾ ವಿಧಿ ವಿಧಾನಗಳು ಹಲವಾರು ಶತಮಾನಗಳಿಂದ ಪರಿಯಾಗಿ ನಡೆಯದೇ ಇತ್ತು.

ಮುಂದೆ 2021ರಲ್ಲಿ ಅಂಗಾರಬೆಟ್ಟು ಬಂಗೇರ ಕುಟುಂಬದ ಮನೆಯಲ್ಲಿ ದೈವಜ್ಞರ ಮುಖೇನ ನವಗ್ರಹಗಳನ್ನು ಮುಂದಿಟ್ಟು ಅಷ್ಟಮಂಗಲ ಸ್ವರ್ಣ ಪ್ರಶ್ನೆಯಲ್ಲಿ ತಂತಿಸಿದಾಗ ಕಂಬಳಬೆಟ್ಟು ಹೊಸಮಾರು ಎಂಬಲ್ಲಿಯ ಸರ್ಪ ಹಾಗೂ ಸಾನಿಧ್ಯ ಶಕ್ತಿಗಳ ಕ್ಷೇತ್ರವಿರುವುದು ಕಂಡುಬಂತು. ಈ ಕ್ಷೇತ್ರವು ಆರಾಧನೆ ಇಲ್ಲದೆ ನಶಿಸಿರುವುದೇ ಕುಟುಂಬದ ಶ್ರೇಯಾಭಿವೃದ್ಧಿಗೆ ಪ್ರಮುಖ ದೋಷವಾಗಿ ಕಂಡುಂಬರಿರುತ್ತದೆ. ಇದರ ಜೊತೆ ರಕ್ತೇಶ್ವರಿ, ಕೊರತಿ, ಬ್ರಹ್ಮಗುರು ಎಂಬ ಇತರ ಶಕ್ತಿಗಳು ಇರೂವುದದೂ ಗೋಚರವಾಗಿರುತ್ತದೆ. ಇದರ ಜೀರ್ಣೋದ್ಧಾರಕ್ಕೆ ಸತತ ನಾಲ್ಕು ವರ್ಷಗಳಿಂದ ಪ್ರಯತ್ನಿಸಿದರೂ ಮುಂದುವರಿಸಲು ಆಗಿಲ್ಲ.

ಇದೀಗ ಕಳೆದ 2025ನೇ ಎಪ್ರಿಲ್ 4 ರಿಂದ ಬಿಂಬ ಹಾಗೂ ಸಾನಿಧ್ಯ ಶಕ್ತಿಗಳ ಬಗ್ಗೆ ಜೀರ್ಣೋದ್ಧಾರ ಕೆಲಸಗಳನ್ನು ಕೈಗೊಂಡು ಇಂದು ಪ್ರತಿಷ್ಠಾ ಕಲಶವನ್ನು ಮಾಡುವುದಾಗಿ ತೀರ್ಮಾನಿಸಿತ್ತು.