Friday, April 19, 2024
spot_imgspot_img
spot_imgspot_img

ತುಳು ಭಾಷೆಯಲ್ಲಿ ಹೊಸ ಪ್ರತಿಭೆಗಳ ಪ್ರಯತ್ನದ ಫಲವೇ “ಕಂಟಕ”

- Advertisement -G L Acharya panikkar
- Advertisement -

ರಡೂವರೆ ಗಂಟೆ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುತ್ತಿದ್ದ ಪ್ರೇಕ್ಷಕನಿಗೆ ತನ್ನ ಮನೆಯಲ್ಲೇ ಅದೂ ತನ್ನ ಮೊಬೈಲ್‌ನಲ್ಲೇ ಕೇವಲ ನಿಮಿಷಗಳ ಲೆಕ್ಕದಲ್ಲಿ ಚಿತ್ರ ಅಂದರೆ ಕಿರುಚಿತ್ರ ನೋಡಿ ಮನೋರಂಜನೆ ಪಡೆಯುವ ಕಾಲವಿದು. ಇಂತಹ ಕಿರುಚಿತ್ರಗಳ ಲೋಕದಲ್ಲಿ ಹೊಸ ಪ್ರತಿಭೆಗಳ ಪ್ರಯತ್ನದ ಫಲವೇ “ಕಂಟಕ” .


ಸಂಸಾರಿಕ, ಕುತೂಹಲಕಾರಿ ಹಾಗೂ ರೋಚಕತೆಗೆ ಒತ್ತು ನೀಡುವ ಸಣ್ಣ ಕಥಾಹಂದರ ಹೊಂದಿರುವ ಕೂಳೂರ್ ಕ್ರಿಯೇಷನ್ ಬ್ಯಾನರಿನಡಿಯಲ್ಲಿ ಪುಷ್ಪರಾಜ್ ಶೆಟ್ಟಿ ನಿರ್ದೇಶನದ ಕಂಟಕ ತುಳು ಕಿರು ಚಿತ್ರ ನವಂಬರ್ 14 ರಂದು ತೆರೆಕಂಡಿತ್ತು. ಯಾವುದಕ್ಕೂ ಸೌಭಾಗ್ಯ ಬೇಕು, ಮದುವೆ ಆಗುವುದಕ್ಕೂ ಯೋಗ ಕೂಡಿ ಬರಬೇಕು ಎಂಬ ಸುಂದರ ತಿರುಳಿನೊಂದಿಗೆ ಜಯರಾಜ್ ಶೆಟ್ಟಿ ಚಾರ್ಲರವರು ಬಹಳ ಅದ್ಭುತವಾಗಿ ತಮ್ಮ ಕಥೆಯನ್ನು ತೆರೆ ಮೇಲೆ ಪ್ರದರ್ಶಿಸಿದ್ದಾರೆ.

ಬಾತು ಕುಲಾಲ್ ಛಾಯಾಗ್ರಹಣದಲ್ಲಿ ಮೂಡಿ ಬಂದಿರುವ ಈ ಕಿರು ಚಿತ್ರದ ನಿರ್ಮಾಪಕರು ಮೋಹನ್ ಶೆಟ್ಟಿ ಮಜ್ಜಾರ್. ಖ್ಯಾತ ಕರಾವಳಿ ಸಂಗೀತ ನಿರ್ದೇಶಕ ಗುರು ಬಾಯರ್ ರವರ ಸಂಗೀತ ಮತ್ತು ತುಳುನಾಡ ಕಲಾ ಕದಿಕೆ ರಾಜೇಶ್ ಮುಗುಳಿ ಸಾಹಿತ್ಯದಲ್ಲಿ ಮೂಡಿಬಂದ ಹಾಡಿಗೆ ನವೀನ್ ಕೊಪ್ಪ ಧ್ವನಿ ಸೇರಿಸಿದ್ದಾರೆ. ನವಿರಾದ ಹಾಸ್ಯದೊಂದಿಗೆ ಸಂಭಾಷಣೆಯನ್ನು ರಚಿಸಿದ ನಿರ್ದೇಶಕ ಪುಷ್ಪರಾಜ್ ಶೆಟ್ಟಿ ಕುಳೂರುರವರು ತಮ್ಮ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಂಡಿದ್ದಾರೆ. ಚಿತ್ರಕಥೆ ಮತ್ತು ಅಸೋಸಿಯೇಟ್ ಡೈರೆಕ್ಟರ್ ಆಗಿ ಶಶಿಕುಮಾರ್ ಕುಳೂರು, ಪ್ರೊಡಕ್ಷನ್ ಮೆನೇಜರ್ ಆಗಿ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯ ನಿರ್ವಹಿಸಿದ್ದಾರೆ.


ಒಟ್ಟಿನಲ್ಲಿ ಕುಟುಂಬ ಸಮೇತ ನೋಡಬಹುದಾದಂತಹ ಒಂದು ಅದ್ಭುತ ಕಿರುಚಿತ್ರವು ಹಾಸ್ಯ ಸಂಭಾಷಣೆ, ಹಾಸ್ಯ ನಟನೆ ಪ್ರೇಕ್ಷಕರಿಗೆ ಇನ್ನಷ್ಟು ಮನೋರಂಜನೆ ನೀಡಿದೆ. ಪ್ರಸ್ತುತ ಲಾಕ್ ಡೌನ್ ಸನ್ನಿವೇಶದಲ್ಲಿ ಆದ ಗೊಂದಲ, ಅನಾಹುತವನ್ನು ಆಶಯವಾಗಿಟ್ಟುಕೊಂಡು ಚಿತ್ರದ ಅಂತ್ಯ ಭಾಗವನ್ನು ಅರ್ಥಪೂರ್ಣವಾಗಿ ಕೊನೆಗೊಳ್ಳಿಸುವಲ್ಲಿ ಚಿತ್ರ ತಂಡ ಯಶಸ್ಸುಗೊಂಡಿದೆ.

ಅನೇಕ ಹೊಸ ಹೊಸ ಯುವ ಕಲಾವಿದರ ನಟನೆ ಹಾಗೂ ಸಹಕಾರದಿಂದ ಮೂಡಿಬಂದ ಈ ಕಂಟಕ ಕಿರುಚಿತ್ರ ಚೊಚ್ಚಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ತುಳು ಭಾಷೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.
ಇದೀಗ ತುಳು ಭಾಷೆಯ ಉತ್ತಮ ಕಿರುಚಿತ್ರಗಳ ಪಟ್ಟಿಯಲ್ಲಿ ‘ಕಂಟಕ’ ಸೇರಿಕೊಂಡಿದೆ. https://youtu.be/H9ifyKFl0ZM

- Advertisement -

Related news

error: Content is protected !!