Monday, May 6, 2024
spot_imgspot_img
spot_imgspot_img

ಕನ್ಯಾನ: ಬೃಹತ್ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕನ್ಯಾನ ಗ್ರಾಮ ಸಮಿತಿ. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಉಡುಪಿ, ಸುಳ್ಯ. ಎಸ್ಸಿಲೋರ್ ವಿಷನ್ ಪೌಂಡೇಶ ನ್, ಬೆಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ )ಡಾ. ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ) ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇವರ ಜಂಟಿ ಸಹಯೋಗದಲ್ಲಿ ಬೃಹತ್ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮ ಕನ್ಯಾನ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ಜರಗಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದರು. ದಿವ್ಯ ಉಪಸ್ಥಿಯಲ್ಲಿ ಶ್ರೀ ಶ್ರೀ ಮಹಾಬಲ ಸ್ವಾಮೀಜಿ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಕಣಿಯೂರು ಹಾಗೂ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಹಾಗೂ ಧರ್ಮ ಪ್ರಸಾದ್ ರೈ ಹಿರಿಯ ವ್ಯವಸ್ಥಪಾಕರು ಎಸ್ಸಿ ಲೋರ್ ವಿಷನ್ ಪೌಂಡೇಶನ್ ಬೆಂಗಳೂರು, ಡಾ: ಅವಿನಾಶ್, ಡಾ ಗುಣಶ್ರೀ, ಯಶವಂತ್ ವಿಟ್ಲ,ಒಡಿಯೂರು ವಿವಿದೋದ್ದೇಶ ಸೌಹಾರ್ದ ಸಹಕಾರಿ ಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಉಪಸ್ಥಿತರಿದ್ದರು.

ಗುಲಾಬಿ ಇವರ ಪ್ರಾರ್ಥನೆ, ಪಿ ಎಸ್ ರವೀಂದ್ರನಾಥ್ ಪಂಜಾಜೆ ಸ್ವಾಗತಿಸಿದರು. ಶಿಬಿರದಲ್ಲಿ 352 ಮಂದಿ ಉಚಿತ ಕಣ್ಣಿನ ಚಿಕೆತ್ಸೆ ನಡೆಸಲಾಯಿತು. ಕರೋಪಾಡಿ ಗ್ರಾಮ ವಿಕಾಸ ಯೋಜನೆಯ ಸೇವಾದೀಕ್ಷಿತರಾದ ರಾಧಾಕೃಷ್ಣ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು. ಮಾತೇಶ್ ಭoಡಾರಿ ಧನ್ಯವಾದ ಸಮರ್ಪಿಸಿದರು.

- Advertisement -

Related news

error: Content is protected !!