Thursday, July 29, 2021
spot_imgspot_img
spot_imgspot_img

ವಿಟ್ಲ: ಕನ್ಯಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಪೊಲೀಸ್ ಹೊರಠಾಣೆ ಉದ್ಘಾಟನೆ

- Advertisement -
- Advertisement -

ವಿಟ್ಲ: ಜನರ ಬಹುವರ್ಷದ ಬೇಡಿಕೆಯಾದ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ದಲ್ಲಿ ಪೊಲೀಸ್ ಇಲಾಖೆ, ಸಾರ್ವಜನಿಕರ ಸಹಕಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಕನ್ಯಾನ ಪೊಲೀಸ್ ಹೊರಠಾಣೆ ಉದ್ಘಾಟನೆಗೊಂಡಿತ್ತು.

ಕನ್ಯಾನ, ಕರೋಪಾಡಿ ಭಾಗದಲ್ಲಿ ಕೇರಳಕ್ಕೆ ಸಂಪರ್ಕಿಸಲು ನೂರಾರು ದಾರಿಗಳಿದ್ದು, ಇದು ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿತ್ತು. ಕನ್ಯಾನ ಕರೋಪಾಡಿಯಲ್ಲಿ ಘಟನೆ ನಡೆದಾಗ ವಿಟ್ಲ ಪೊಲೀಸ್ ಠಾಣೆಯಿಂದ ಸಿಬ್ಬಂದಿಗಳು ಆಗಮಿಸಬೇಕು. ಈ ವೇಳೆ ಆರೋಪಿಗಳು ಕೇರಳಕ್ಕೆ ಪರಾರಿಯಾಗುತ್ತಾರೆ. ಇಲ್ಲಿ ಹೊರ ಠಾಣೆ ನಿರ್ಮಾಣವಾಗಿದ್ದರಿಂದ ಕ್ರಿಮಿನಲ್ ಚಟುವಟಿಕೆಗಳನ್ನು ನಿಯಂತ್ರಿಸಬಹುದು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೂತನ ಠಾಣೆಯನ್ನು ಉದ್ಘಾಟಿಸಿ, ಶುಭಾ ಹಾರೈಸಿದರು.ಈ ಸಂದರ್ಭ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ವಿಟ್ಲ ಎಸೈ ವಿನೋದ್ ರೆಡ್ಡಿ, ಪ್ರೋಷನರಿ ಕೃಷ್ಣಕಾಂತ್, ಪುಷ್ಪರಾಜ್ ಚೌಟ, ಕೃಷ್ಣ, ಕೆ.ಪಿ ಅಬ್ದುಲ್ ರಹಿಮಾನ್, ರಘುನಾಥ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

MOST POPULAR

HOT NEWS

Related news

error: Content is protected !!