



ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣಿನ ಗಣಿಗಾರಿಕೆ (ರೆಡ್ ಬಾಕ್ಸೈಟ್ ದಂಧೆ) ನಡೆಯುತ್ತಿದ್ದರೂ ಕಣ್ಣಿದ್ದು ಕುರುಡರಾದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ ಪಿ ಅಬ್ದುಲ್ ರಹಿಮಾನ್, ಸದಸ್ಯ ಅಬ್ದುಲ್ ಮಜೀದ್ ಮಾತನಾಡಿ “ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಂಎಲ್‌ಸಿ ಬಿ ಎಂ ಫಾರೂಕ್ ಮತ್ತು ಅವರ ಸಹೋದರ ಬಿ ಎಂ ಸೌಕತ್ ಎಂಬವರ ಸರ್ಕಾರದ ನಿವೇಶನಕ್ಕೆ ಕಾದಿರಿಸಿದ 4 ಎಕ್ರೆ ಜಾಗದಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಈ ಬಗ್ಗೆ ತಹಶೀಲ್ದಾರರು ಮತ್ತು ಮಾನ್ಯಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ದ.ಕ ಜಿಲ್ಲೆ ಮತ್ತು ಕಂದಾಯ ಇತರ ಅಧಿಕಾರಿ ಇವರೆಲ್ಲರೂ ಪರಿಶೀಲನೆ ಮತ್ತು ಸರ್ವೆ ಮಾಡಿದ್ದರು. ಆದರೇ ಇದರ ಬಗ್ಗೆ ಯಾವುದೇ ಮಾಹಿತಿ ಮತ್ತು ಕ್ರಮಗಳನ್ನು ಇಲಾಖೆ ಕೈಗೊಂಡಿರುವುದಿಲ್ಲ. ಮತ್ತು ಇಲಾಖೆಯ ಜಿಲ್ಲಾಧಿಕಾರಿ, ಭೂ&ಗಣಿ ಇಲಾಖೆಯ ರಾಜ್ಯ ನಿರ್ದೇಶಕರು ಭೂ ಮತ್ತು ಗಣಿ ಇಲಾಖೆಯ ಮಂತ್ರಿಗಳು, ಕಂದಾಯ ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು ಯಾವುದೇ ಮಾಹಿತಿ ನೀಡಿರುವುದಿಲ್ಲ.


ದ.ಕ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕುಮಾರಿ ದ್ವಿತೀಯ ಅವರಿಗೆ ಅರ್ಜಿ ಮುಖಾಂತರ ದೂರು ನೀಡಿದರೂ ಹಾಗೂ ಅಕ್ರಮ ಮಣ್ಣು ಸಾಗಾಟದ ಬಗ್ಗೆ ದೂರು ನೀಡಲು ಫೋನ್ ಕರೆ ಮಾಡಿದರೂ ಯಾರ ಫೋನಿಗೂ ಸ್ಪಂದಿಸದೆ ಅಕ್ರಮ ಗಣಿಗಾರಿಕೆ ಮಾಡುವವರ ಪರವಾಗಿ ವರ್ತಿಸುತ್ತಿದ್ದಾರೆ. ಆದ್ದರಿಂದ ಗಣಿ ಮತ್ತು ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕುಮಾರಿ ದ್ವಿತೀಯ ಇವರನ್ನು ಅಮಾನತುಗೊಳಿಸಬೇಕೆಂದು” ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ಮೊಯಿದೀನ್ ಕುಂಞ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.









