Wednesday, June 17, 2026
spot_imgspot_img
spot_imgspot_img

ಕಾಪು: ಮಗಳ ಜೊತೆ ತಾಯಿ ನಾಪತ್ತೆ; ದೂರು ದಾಖಲು

- Advertisement -
- Advertisement -

ಕಾಪು: ಹತ್ತು ವರ್ಷದ ಮಗಳ ಜೊತೆ ತಾಯಿ ನಾಪತ್ತೆಯಾದ ಘಟನೆ ಕಾಪುವಿನ ಮೂಳೂರಿನಲ್ಲಿ ನಡೆದಿದೆ.

ಮೂಳೂರು ಹೊಟೇಲ್ ಬಳಿ ನಿವಾಸಿ ಆಸೀರ್ ಅಲಿ ಅವರ ಪತ್ನಿ ರೇಷ್ಮಾ (36) ಮತ್ತು ಮಗಳು ಆಯಿಷ್ ಫತ್ತುಲ್ ನಿದೀರಾ (10) ನಾಪತ್ತೆಯಾದವರು.

ಖಾಸಗಿ ಬಸ್ ನಿರ್ವಾಹಕ ಆಸೀರ್ ಅಲಿ ಬೆಳಗ್ಗೆ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಬಂದು ನೋಡಿದಾಗ, ಪತ್ನಿ ಮತ್ತು ಮಗಳು ನಾಪತ್ತೆಯಾಗಿದ್ದರು ಎಂದು ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆಸೀರ್‌‌ ಅವರು ತಿಳಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!