Wednesday, April 24, 2024
spot_imgspot_img
spot_imgspot_img

ಸಂಗೀತದಲ್ಲಿ ಸದ್ದುಮಾಡುತ್ತಿರುವ ಕರಾವಳಿಯ ಅಣ್ಣ – ತಂಗಿ

- Advertisement -G L Acharya panikkar
- Advertisement -

ಸಾಧನೆ ಎಂಬ ಶಿಖರವನ್ನು ಒಂದೆರಡು ದಿನಗಳಲ್ಲಿ ಏರಲು ಸಾಧ್ಯವಿಲ್ಲ. ಒಂದು ವೇಳೆ ಅಲ್ಪ ಸಮಯದಲ್ಲಿ ಸಾಧನೆ ನಡೆದರೆ ಆ ಸಾಧನೆ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಸಾಧನೆಯ ಹಾದಿ ಯಾವಾಗಲೂ ಕಠಿಣವಾಗಿರಬೇಕು. ಅತಿಯಾದ ಪರಿಶ್ರಮವಿರಬೇಕು. ಆಗ ನಿಜವಾದ ಸಾಧನೆಗೆ ಬೆಲೆ ಸಿಗುತ್ತದೆ.
ಇಂತಹ ಪರಿಶ್ರಮದ ಹಾದಿಯಲ್ಲಿ ದಿವ್ಯನಿಧಿ ರೈ ಮತ್ತು ದಿವ್ಯ ಧನುಷ್ ರೈ ಎರುಂಬು ಇವರ ಸಾಧನೆ ಕೊರೋನ ಲಾಕ್ ಡೌನ್ ಸಮಯದಲ್ಲಿ ಅನಾವರಣಗೊಂಡಿದೆ.


ಬಾಲ್ಯದಿಂದಲೇ ಗುರುಗಳಾದ ರವೀಶ ಆಚಾರ್ಯರಿಂದ ಸಂಗೀತ ಅಭ್ಯಾಸ ಮಾಡಿದ ದಿವ್ಯನಿಧಿ , ಆನಂತರ ಸುಗಮಸಂಗೀತವನ್ನು ಗಾನಸಿರಿ ಡಾ.ಕಿರಣ್ ಕುಮಾರ್ ಮತ್ತು ಹಿಂದೂಸ್ಥಾನಿ ಸಂಗೀತ ಶಿಕ್ಷಣವನ್ನು ಶಾರದಾ ಮೇಡಂ ರವರಿಂದ ಪಡೆದಿರುತ್ತಾರೆ. ವಿಟ್ಲ ಜೇಸಿಸ್ ಶಾಲೆಯಲ್ಲಿ SSLC ಪೂರ್ಣಗೊಳಿಸಿ ಮಂಗಳೂರಿನ Expert PU College ನಲ್ಲಿ ಇದೀಗ ದ್ವಿತೀಯ PUC ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ‌.
ದಿವ್ಯಧನುಷ್ ರೈ ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಕಲಿತು ಇದೀಗ KVG ಸುಳ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಗುರುಗಳಾದ ಮನೀಷ್ ದಾಸ್ ಮ್ರಿದುಳ್ ರವರಿಂದ ಕೊಳಲುವವಾದನ ಅಭ್ಯಾಸ ಮಾಡುತ್ತಿದ್ದಾನೆ .

ತಂಗಿ ದಿವ್ಯನಿಧಿ ಕೀಬೋರ್ಡ್ ನುಡಿಸಿ ಗಾಯನದ ಮೂಲಕ ರಂಜಿಸಿದರೆ ಅಣ್ಣ ದಿವ್ಯಧನುಷ್ ಕೊಳಲು ನುಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುತ್ತಾರೆ. ಕವಿ ಸುಬ್ರಾಯ ಚೊಕ್ಕಾಡಿಯವರ “ಮುನಿಸು ತರವೇ…” ಹಾಡನ್ನು Face-Book ಪುಟದಲ್ಲಿ ಕೊರೋನ ಸಮಯದಲ್ಲಿ ಹಾಡಿದಾಗ ಸಂಗೀತಾಸಕ್ತರಿಂದ ಮುಕ್ತಕಂಠದ ಪ್ರಶಂಸೆ ಹರಿದು ಬಂತು. 1.80 ಲಕ್ಷ ಜನರು ಈ ಹಾಡನ್ನು ಕೇಳಿ ಹರಸಿದರು. ಆನಂತರ Face-Book LIVE , ಕರಾವಳಿಯ ಚಾನೆಲ್ Daiji-World ನ ಜನಪ್ರಿಯ “ಕೊರೋನ ಗೆಲ್ಲೋಣ” ಕಾರ್ಯಕ್ರಮ ಇವರಿಗೆ ಇನ್ನೂ ಹೆಚ್ಚಿನ ಪ್ರಸಿದ್ದಿ ತಂದುಕೊಟ್ಟಿದೆ.

https://www.facebook.com/Divyanidhi-Divyadhanush-Rai-112184280503033/?ti=as

ಬಹರೈನ್ ನಿಂದ ಗಣೇಶ್ ಕುಲಾಲ್ ಮಾಣಿಲ‌ರವರು ಆಯೋಜಿಸಿದ Corona – No Fear ,Take Care , We Are With Warriors ಎಂಬ ಮನರಂಜನಾ ಕಾರ್ಯಕ್ರಮದ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದ ಈ ಅಣ್ಣ ತಂಗಿ ಜೋಡಿಗೆ ಅನೇಕ ಪ್ರಶಸ್ತಿ ಪುರಸ್ಕಾರ ಸಂದಿವೆ.

https://www.youtube.com/channel/UCQw0pvb0imBu3cqO3YIqc7g

ಬೆಂಗಳೂರು ಸೃಷ್ಟಿ ಕಲಾ ವಿದ್ಯಾಲಯ ಆಯೋಜಿಸಿದ “ಸ್ವರ ಸಾಮ್ರಾಟ್” ಸ್ಪರ್ಧೆಯಲ್ಲಿ ದಿವ್ಯನಿಧಿ ರೈ ತೃತೀಯ ಬಹುಮಾನ ವಿಜೇತೆ.
ತುಳುಕೂಟ ಪುಣೆ , Students Wing Puttur ಆಯೋಜಿಸಿದ ಸಂಗೀತ – ಕಲಾತ್ಮಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದ ವಿಜಯಿಗಳಾದ ಈ ಅಣ್ಣ ತಂಗಿಯರ ಪ್ರತಿಭಾ ಸಂಪನ್ನತೆಗೆ ಮೆರುಗು ನೀಡಿದೆ.

ಅಳಿಕೆ ಗ್ರಾಮದ ‘ಎರುಂಬು’ ಎಂಬಲ್ಲಿ ಈ ಜನಿಸಿದ ಈ ಕಲಾಪ್ರತಿಭೆಗಳು ಮೋಹನದಾಸ್ ರೈ ಮತ್ತು ಜಯಲಕ್ಷ್ಮಿ ದಂಪತಿಯ ಮಕ್ಕಳು. .
ಇವರ ಈ ಸಂಗೀತಸಾಧನೆ ದೇಶಕ್ಕೆ ಹೆಸರು ತಂದುಕೊಡಲಿ , ಇವರ ಕನಸು ನನಸಾಗಲಿ ಎಂದು ನಾವೆಲ್ಲರೂ ಹಾರೈಸೋಣ.

- Advertisement -

Related news

error: Content is protected !!