Tuesday, July 1, 2025
spot_imgspot_img
spot_imgspot_img

ಕರವಾಳಿ ಪ್ರವಾಸದಲ್ಲಿ ಹಿಂ.ಜಾ.ವೇ. ನಾಯಕ ಜಗದೀಶ್ ಕಾರಂತ್

- Advertisement -
- Advertisement -

ಹಿಂದು ಜಾಗರಣ ವೇದಿಕೆಯ ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಅಖಿಲ ಭಾರತ ಟೋಳಿ ಸದಸ್ಯ ಜಗದೀಶ್ ಕಾರಂತರು ಇಂದು ಕರವಾಳಿ ಪ್ರವಾಸದಲ್ಲಿದ್ದರು. ಈ ವೇಳೆ ಹಿಂ.ಜಾ.ವೇ.ವಿಧಿ ಆಯಾಮದ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್‌ರವರ ತಂದೆ ಮೊನ್ನೆ ವಿಧಿವಶವಾಗಿದ್ದರು ಅವರ ಮನೆಗೆ ಬೇಟಿ ನೀಡಿ ಮನೆಯವರಿಗೆ ಸಾಂತ್ವನದ ನುಡಿಗಳನ್ನು ನೀಡಿದರು.

ಬಳಿಕ ಪ್ರಾಂತ ಕಾರ್ಯಕರಣೆ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ ಮತ್ತು ಕಾರ್ಯಕರ್ತರ ಶಬರಿಮಲೆ ಯಾತ್ರೆಯ ಇರುಮುಡಿ ಕಟ್ಟುವ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂಧರ್ಭದಲ್ಲಿ ಹಿಂ.ಜಾ.ವೇ.ಪ್ರಾಂತ ಸಂಘಟಕರು ಪ್ರಶಾಂತ್ ಬಂದ್ಯೂಡ್, ಪ್ರಾಂತ ಸಹ ಸಂಯೋಜಕರಾದ ಮಹೇಶ್ ಕಡಗದಾಲು ,ಮಂಗಳೂರು ಗ್ರಾಮಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣೆ,ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಮತ್ತು ದಿನೇಶ್ ಪಂಜಿಗ, ಪುಷ್ಪರಾಜ್ ಕಮ್ಮಾಜೆ, ಹರ್ಷ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು

- Advertisement -

Related news

error: Content is protected !!