Monday, April 29, 2024
spot_imgspot_img
spot_imgspot_img

ವಿಟ್ಲ: ಆ.31 ಮತ್ತು ಸೆ. 1ರಂದು ಕಾರ್ತಿಕ್ ಫ್ರೆಂಡ್ಸ್‌ ಕ್ಲಬ್ (ರಿ) ಚಂದಳಿಕೆ, ವಿಟ್ಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಚಂದಳಿಕೆ ವಿಟ್ಲ ಇದರ ೨೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

- Advertisement -G L Acharya panikkar
- Advertisement -

ಕಾರ್ತಿಕ್ ಫ್ರೆಂಡ್ಸ್‌ ಕ್ಲಬ್ (ರಿ) ಚಂದಳಿಕೆ, ವಿಟ್ಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಚಂದಳಿಕೆ ವಿಟ್ಲ ಇದರ ೨೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆಗಸ್ಟ್‌ 31 ಮತ್ತು ಸೆಪ್ಟೆಂಬರ್ 1 ರಂದು ಚಂದಳಿಕೆಯ ಮಂಗಳ ಮಂಟಪದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

31-08-2022 ನೇ ಬುಧವಾರದಂದು ಪೂರ್ವಾಹ್ನ ಗಂಟೆ 8ಕ್ಕೆ ಗಣಪತಿ ಹೋಮ, 9:15ಕ್ಕೆ ಉದಯೇಶ ಕೆದಿಲಾಯ ಅವರಿಂದ ಮೂರ್ತಿ ಪ್ರತಿಷ್ಠೆ, 9:30ಕ್ಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿಯ ಉಪಾಧ್ಯಕ್ಷ ಸೇಸಪ್ಪ ಆಚಾರ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಉದ್ಘಾಟನೆಯನ್ನು ರಕ್ಷಿತಾ ಸನತ್ ನಿಡ್ಯ ಚಂದಳಿಕೆ ಸದಸ್ಯರು ವಿಟ್ಲ ಪಟ್ಟಣಪಂಚಾಯತ್ ನೆರವೇರಿಸಲಿದ್ದಾರೆ.

10 ಗಂಟೆಯಿಂದ ಭಜನೆ, ಧೂಮಾವತಿ ಸ್ವ-ಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಟ್ಲ ಮೂಡೂರು, ವಿಟ್ಲ ವಲಯ ಇವರಿಂದ, 11-00 ರಿಂದ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದ ವಿ ಶಾರದಾ ಡಾ| ಪಿ.ಕೆ. ದಾಮೋದರರವರ ಶಿಷ್ಯರಾದ ಕುಮಾರಿ ತೃಷಾ ಜಿ.ಯಸ್. ಮತ್ತು ಮಾಸ್ಟರ್ ಚಿಂತನ್ ಇವರಿಂದ ಸ್ಯಾಕ್ಸೋಫೋನ್ ವಾದನ

11-30: ವಿವಿಧ ಸ್ಪರ್ಧೆಗಳು

ಚಿತ್ರಕಲಾ ಸ್ಪರ್ಧೆ (ಶಾಲಾ ಮಕ್ಕಳಿಗೆ), ಭಕ್ತಿಗೀತೆ ಸ್ಪರ್ಧೆ (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ), ಸಂಗೀತ ಕುರ್ಚಿ (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ), ಮೂರು ಕಾಲಿನ ಓಟ (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ), ಕಪ್ಪೆ ಜಿಗಿತ (ಅಂಗನವಾಡಿ ಮಕ್ಕಳಿಗೆ), ಲಿಂಬೆ ಚಮಚ ಓಟ (ಮಹಿಳೆಯರಿಗೆ), ಬಾಲ್ದಿಗೆ ಚೆಂಡು ಹಾಕುವುದು (ಮಹಿಳೆಯರಿಗೆ), ತೆಂಗಿನಕಾಯಿ ಸುಲಿಯುವ ಸ್ಪರ್ಧೆ (ಮಹಿಳೆಯರಿಗೆ), ಮಡಕೆ ಒಡೆಯುವುದು (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ), ಹಗ್ಗಜಗ್ಗಾಟ (15 ವರ್ಷ ಕೆಳಗಿನ ಮಕ್ಕಳಿಗೆ ಮತ್ತು ಮಹಿಳೆಯರಿಗೆ) ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6 ಗಂಟೆಗೆ ಆರ್‌ ಕೆ ಆರ್ಟ್ಸ್ ಚಿಣ್ಣರ ಮನೆ ವಿಟ್ಲ ಅವರಿಂದ ಕುಣಿತ ಭಜನೆ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರ ಭಟ್, ಬದನಾಜೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರಿತಾ ವಲಯ ಮೇಲ್ವಿಚಾರಕರು

ಶ್ರೀ ಕ್ಷೇ.ಧ.ಗ್ರಾ.ಯೋ, ವಿಟ್ಲ ವಲಯ, ಸುಭಾಶ್‌ಚಂದ್ರ ನಾಯಕ್, ಉದ್ಯಮಿಗಳು ವಿಟ್ಲ, ವಿಶ್ವನಾಥ ಗೌಡ ಕುಳಾಲು, ಮುಖ್ಯೋಪಾಧ್ಯಾಯರು ದ.ಜಿ.ಪಂ.ಹಿ.ಪ್ರಾ. ಶಾಲೆ, ಚಂದಳಿಕೆ ಆಗಮಿಸಲಿದ್ದಾರೆ. ಈ ವೇಳೆ ಡಾ| ಬಿ.ಕೆ. ಹೆಗ್ಡೆ ವೈದ್ಯರು ಪುಷ್ಪಕ್ ಕ್ಲಿನಿಕ್ ವಿಟ್ಲ, ಗೋಪಾಲಕೃಷ್ಣ ಎನ್. ಸೈನಿಕರು ಭಾರತೀಯ ಸೇನೆ, ಮುರಳಿ ವಿಟ್ಲ ಸಾಮಾಜಿಕ ಕಾರ್ಯಕರ್ತ ಇವರಿಗೆ ಸನ್ಮಾನ ನಡೆಯಲಿದೆ.

ಗಂಟೆ 9-00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಸೇವೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಗಾಯನ ರತ್ನ ಬಿರುದಾಂಕಿತ ಪ್ರವೀಣ್ ಜಯ ಬಿಟ್ಲ ಸಾರರ್ಥ್ಯದ ನ್ಯೂ ಪೈನ್ ಮ್ಯೂಸಿಕಲ್ ಬಿಟ್ಲ ಇವರಿಂದ ಸ್ವರಾಂಜಲಿ ಭಕ್ತಿ-ಭಾವ-ಜಾನಪದ ಗೀತೆಗಳ ಸಂಗೀತ ಸಂಜೆ ನಡೆಯಲಿದೆ.

ದಿನಾಂಕ : 01-09-2022 ನೇ ಗುರುವಾರ ಪೂ. ಗಂಟೆ 8-00 ಕ್ಕೆ : ಗಣಪತಿ ಹೋಮ, 8-306 : ಬೆಳಗ್ಗಿನ ಪೂಜೆ, 9-00 ಕ್ಕೆ : ಭಜನೆ ಶ್ರೀ ವಿಶ್ವನಾಥ ದೇವಾಡಿಗ ಮತ್ತು ಬಳಗ ವಿಟ್ಲದವರಿಂದ 9-30 ಕ್ಕೆ, 12-30 ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ , ಸಾರ್ವಜನಿಕ ಅನ್ನಸಂತರ್ಪಣೆ, ಗಂಟೆ 3-00 ಕ್ಕೆ : ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಸಂಜೆ 5-00 ಕ್ಕೆ : ಶೋಭಾಯಾತ್ರೆ ನಡೆಯಲಿದೆ.

- Advertisement -

Related news

error: Content is protected !!