Monday, June 15, 2026
spot_imgspot_img
spot_imgspot_img

ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿ ಸಮುದ್ರಪಾಲು

- Advertisement -
- Advertisement -

ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ ಸಮುದ್ರಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಸಮುದ್ರ ತೀರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪುಣೆ ಮೂಲದ ಐಟಿ ಕಂಪನಿಯ ಉದ್ಯೋಗಿ ಜೀವನ್ ಭಟ್ಟರಾಯಿ(26) ರೀಲ್ಸ್ ಮಾಡಲು ಹೋಗಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ ಯುವಕ ಖಾಸಗಿ ರೆಸಾರ್ಟ್ನಲ್ಲಿ ಮೂರು ದಿನದಿಂದ ತಂಗಿದ್ದರು. ಇಂದು ಚಕ್ ಔಟ್ ಮಾಡಬೇಕಿದ್ದ ಯುವಕ ಸ್ನೇಹಿತರ ಜೊತೆ ಕಡ್ಲೆ ಸಮುದ್ರತೀರದಲ್ಲಿ ರೀಲ್ಸ್ ಮಾಡಲು ಹೋಗಿದ್ದ ವೇಳೆ ಜೀವನ್ ಸಮುದ್ರದಲ್ಲಿ ಇಳಿದಾಗ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿದ್ದಾರೆ.

ಕರಾವಳಿ ಕಾವಲುಪಡೆ, ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದು, ಈವರೆಗೂ ಜೀವನ್ ಪತ್ತೆಯಾಗಿಲ್ಲ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!