Thursday, April 25, 2024
spot_imgspot_img
spot_imgspot_img

ಕಾರವಾರ: ಪ್ರವಾಸಿಗರ ಆಕರ್ಷಣೆಯ ಪಟ್ಟಿಗೆ ಸೇರಲಿದೆ ” ಡಾಲ್ಫಿನ್ ಪಾರ್ಕ್”-ಏನಿದರ ವಿಶೇಷತೆ ??

- Advertisement -G L Acharya panikkar
- Advertisement -

ಕಾರವಾರ (ಡಿ. 18): ಕಾರವಾರ ದೇಶದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಇಲ್ಲಿನ ಬೀಚ್, ನಡುಗಡ್ಡೆ ಎಲ್ಲರ ಪ್ರಮುಖ ಆಕರ್ಷಿಯ ತಾಣ. ಈಗ ಈ ತಾಣಕ್ಕೆ ಮತ್ತೊಂದು ಗರಿಮೆ ಮೂಡಿಸಲು ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲೆ ಮುಂದಾಗಿದೆ. ಅದೇ ‘ಡಾಲ್ಫಿನ್​ ಪಾರ್ಕ್​’. ರಾಜ್ಯದಲ್ಲಿಯೇ ಮೊದಲ ಬಾರಿ ಈ ರೀತಿಯ ವಿಶಿಷ್ಠ ಯೋಜನೆಯೊಂದು ಜಿಲ್ಲೆಯಲ್ಲಿ ಪ್ರಾರಂಬಿಸುವುದಕ್ಕೆ ಯೋಜನೆ ರೂಪಿಸಲಾಗಿದೆ.

ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಬಾರೀ ಸಂಖ್ಯೆಯ ಡಾಲ್ಫಿನ್ ಮೀನುಗಾರರಿಗೆ ಕಾಣಸಿಗುತ್ತವೆ. ಇಲ್ಲಿನ ದೇವಭಾಗ ಮತ್ತು ಲೈಟ್ ಹೌಸ್ ಕಡಲಲ್ಲಿ ಭಾರೀ ಸಂಖ್ಯೆಯ ಡಾಲ್ಫಿನ್​ಗಳ ಈಜಾಟ ನಡೆಸುತ್ತಿರುವುದನ್ನು ಗಮನಿಸಿದ ಕಾರವಾರ ಕಡಲ ಜೀವವಿಜ್ಞಾನ ಸಂಸ್ಥೆ ಮತ್ತು ಅರಣ್ಯ ಇಲಾಖೆ ಡಾಲ್ಫಿನ್ ಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನ ಸಿದ್ದಪಡಿಸಿದ್ದಾರೆ.

ಈ ಪಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಇಲ್ಲಿನ ಕೂರ್ಮಗಡ ಐಲ್ಯಾಂಡ್ ಮತ್ತು ಲೈಟ್ ಹೌಸ್ ಭಾಗದಲ್ಲಿ ಡಾಲ್ಫಿನ್ ಗಳನ್ನ ಒಂದು ಕಡೆ ಸೇರುವಂತೆ  ವ್ಯವಸ್ಥೆ ಕಲ್ಪಿಸಿ, ಡಾಲ್ಪಿನ್ ಸಂತತಿ ಉಳಿಸಲು ಸೂಕ್ಷ್ಮ ವಲಯ ಗುರುತಿಸಿ ಅಲ್ಲೇ ರೆಸ್ಕ್ಯೂ ಸೆಂಟರ್ ರೀತಿಯ ವಾತಾವರಣ ಮಾಡಲು ನಿರ್ಧರಿಸಿದ್ದಾರೆ.  ಈ ವ್ಯವಸ್ಥೆ ಕೇಂದ್ರ ಅನುಮತಿ ನೀಡುವುದು ಬಾಕಿ ಉಳಿದಿದೆ.

ಕೂರ್ಮಗಡ ಐಲ್ಯಾಂಡ್ ಸಮೀಪದ ಕಡಲಲ್ಲಿ ಕೆಲ ಭಾಗಗಳಲ್ಲಿ ಬೋಟಿಂಗ್​ಗೆ   ನಿರ್ಬಂಧ ಹೇರಿ ಅಲ್ಲಿ ಸೂಕ್ಷ್ಮ ವಲಯದ ವಾತಾವರಣ ಕಲ್ಪಿಸಿ ಪ್ರವಾಸಿಗರಿಗೆ ಡಾಲ್ಫಿನ್ ನೋಡಲು ಸಿಗುವಂತೆ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಸುಮಾರು 10 ಕೋಟಿ ರೂ ವೆಚ್ಚವಾಗಲಿದ್ದು, ಅದಕ್ಕೆ ಕೇಂದ್ರದ ಅನುಮತಿ ನೀಡಿದರೆ, ಭಾರೀ ಸಂಖ್ಯೆಯ ಡಾಲ್ಫಿನ್ ಗಳ ಸಂರಕ್ಷಣೆ ಜೊತೆ, ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗಲಿದೆ.

ಸದ್ಯ ಈಗ ಕೂರ್ಮಗಡ ದ್ವೀಪದ ಅಕ್ಕಪಕ್ಕ ಸಾಕಷ್ಟು ಡಾಲ್ಫಿನ್ ಸಂತತಿ ಇದ್ದರೂ ಬೋಟ್ ಮತ್ತು ಹಡಗುಗಳ ಸಂಚಾರದಿಂದ ಅವು ಪದೇ ಪದೇ ವಲಸೆ ಹೋಗುತ್ತದೆ. ಇದರಿಂದ ಇವು ಪ್ರವಾಸಿಗರಿಗೆ ನೋಡುವುದಕ್ಕೆ ಕಾಣಸಿಗುತ್ತಿಲ್ಲ. ಎಷ್ಟೋ ಬಾರಿ ಪ್ರವಾಸಿಗರು ಅಳಿವಿನಂಚಿನ ಈ ಜೀವಿಯನ್ನ ನೋಡೋಣ ಅಂತಾ ಬಂದ್ರೂ ಅನಿವಾರ್ಯವಾಗಿ ಡಾಲ್ಫಿನ್ ಕಾಣದೇ ಬೇಸರಿಸಿಕೊಂಡು ವಾಪಾಸ್ ಹೋಗುತ್ತಾರೆ.  ಈಗ ಈ ಯೋಜನೆ ಮೂಲಕ ಸೂಕ್ಷ್ಮ ಪ್ರದೇಶ ಗುರುತಿಸಿ ಬೋಟ್ ಕಾರ್ಯನಿರ್ವಹಣೆ ಕಡಿಮೆ ಮಾಡಿದಲ್ಲಿ  ಡಾಲ್ಫಿನ್​ ಸಂರಕ್ಷಣೆ ಜೊತೆ ಮತ್ತೊಂದು ಗರಿಮೆ ರಾಜ್ಯಕ್ಕೆ ಮೂಡಲಿದೆ.

- Advertisement -

Related news

error: Content is protected !!