

ಕರಿಂಕ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕರಿಂಕದ ವ್ಯವಸ್ಥಾಪನಾ ಸಮಿತಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕರಿಂಕ ನೆಟ್ಲಮುಡ್ನೂರು ಅನಂತಾಡಿ ಇದರ ಜಂಟಿ ಆಶ್ರಯದಲ್ಲಿ ದಿನಾಂಕ: ಸೆ. 22-9-2025ನೇ ಸೋಮವಾರದಿಂದ 24-9-2025ನೇ ಬುಧವಾರದವರೆಗೆ ಭಜನಾ ತರಬೇತಿ ಕಾರ್ಯಗಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಿಕ್ಷಕ ವಿಠಲ ನಾಯಕ್ ಕಲ್ಲಡ್ಕ, ಶಿಕ್ಷಕ ಶಿವಗಿರಿ ಕಲ್ಲಡ್ಕ, ತಬಲಾ ಕಲಾವಿದ ಮುರಳಿ ವಿಟ್ಲ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿರುವರು. ಶ್ರೀ ದುರ್ಗಾ ಕ್ಲಿನಿಕ್, ಗ್ರಾಮೀಣ ಆರೋಗ್ಯ ಕೇಂದ್ರ ಗಡಿಯಾರ-ಪೆರಾಜೆ ಲಯನ್ ಡಾ. ಮನೋಹರ ರೈ ಅಂತರಗುತ್ತುರವರು ಶಿಬಿರದ ನಿರ್ದೇಶಕರಾಗಿ ಉಪಸ್ಥಿತರಿರುವರು.

ದಿನಾಂಕ : 22-09-2025ನೇ ಸೋಮವಾರ ಪೂರ್ವಾಹ್ನ 9.00ಕ್ಕೆ ಶಿಬಿರಾರ್ಥಿಗಳ ನೋಂದಣಿ ನಡೆದು ಪೂರ್ವಾಹ್ನ ಗಂಟೆ 9.30ಕ್ಕೆ ಶ್ರೀ ಕ್ಷೇತ್ರ ಕರಿಂಕ ಮುಖ್ಯ ಅರ್ಚಕರು ರಾಮಚಂದ್ರ ಭಟ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಚಲನಚಿತ್ರ ನಟ, ರಂಗ ನಿರ್ದೇಶಕ ಬಿ. ಚೇತನ್ ರೈ, ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಲಯನ್ಸ್ ಕ್ಲಬ್ ಮಾಣಿ ಸ್ಥಾಪಕಾಧ್ಯಕ್ಷ ಲಯನ್ ಗಂಗಾಧರ ರೈ ಎಂ.ಜೆ.ಎಫ್. ತುಂಗೆರೆಕೋಡಿ, ಕೋಲ್ಪೆ ಧಾರ್ಮಿಕ ಮುಖಂಡ ಸುರೇಶ್ ಕೆ.ಎಸ್, ಕೋಸ್ಟಲ್ ಗ್ರೂಪ್ ಮಾಲಕ ಪ್ರಕಾಶ್ ಶೆಟ್ಟಿ ಪುಚ್ಚಾಡಿ ಗೌರವ ಉಪಸ್ಥಿತರಿರುವರು.

ದಿನಾಂಕ 24-09-2025ನೇ ಬುಧವಾರ ಸಮಾರೋಪ ಸಮಾರಂಭ ನಡೆಯಲಿದೆ. ಅಪರಾಹ್ನ 1.00ರಿಂದ ಭಜನಾ ಪ್ರಾತ್ಯಕ್ಷಿಕೆ ನಡೆದು ಅಪರಾಹ್ನ 2.00ರಿಂದ ಸಭಾಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ. ಬಿ. ನರೇಂದ್ರ ರೈ ನೆಲ್ತೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ಅನುಸೂಯ ರೈ ಉರ್ದಿಲಗುತ್ತು, ಕರ್ನಾಟಕ ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜು ಮಾಣಿ ಅಧ್ಯಕ್ಷ ಕಿರಣ್ ಹೆಗ್ಡೆ ಜೋಗಿಬೆಟ್ಟು, ಕರಿಂಕ ಶ್ರೀ ಸಾರ್ವಜನಿಕ ಶಾರದೋತ್ಸವ ಸಮಿತಿ ಅಧ್ಯಕ್ಷ ಹರ್ಷೇಂದ್ರ ಶೆಟ್ಟಿ ಬಾಳಿಕೆ, ಉದ್ಯಮಿ ಯಶವಂತ ಪೂಜಾರಿ ಕರಿಂಕ, ಗುರುದೇವಾ ಸೇವಾ ಬಳಗ, ನೆಟ್ಲಮುಡ್ನೂರು ಆನಂತಾಡಿ ಅಧ್ಯಕ್ಷ ಮುರಳೀಧರ ಶೆಟ್ಟಿ ಕಲ್ಲಾಜೆಗುತ್ತು, ಮಂಗಳೂರು ಎಕ್ಸ್‌ಪರ್ಟ್ ಕಾಲೇಜು ಉಪನ್ಯಾಸಕಿ ಡಾ. ರೂಪಲತಾ ತೀರ್ಥಪ್ರಸಾದ್ ಕೊಂಗಲಾಯಿ, ನಾರ್ಶ ಶಿಕ್ಷಕ ಗೋಪಾಲಕೃಷ್ಣ ಮಾಸ್ತರ್ ನೇರಳಕಟ್ಟೆ, ನವಶಕ್ತಿ ಗುರುವಾಯನಕೆರೆ ಮದಿರಾ ಗ್ರೂಪ್ಸ್ ರಾಜೇಶ್ ಶೆಟ್ಟಿ, ವಿಠಲ ನಾಯಕ್ ಕಲ್ಲಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಅಚ್ಯುತ ಆಚಾರ್ಯ, ಕಿದೆನಾರು ಆನಂತಾಡಿ, ಭಜನಾ ಮಂಡಳಿ ಹಿರಿಯ ಸದಸ್ಯ ಕುಂಡ ಮುಗೇರ, ಜೋಗಿಬೆಟ್ಟು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.

ವಿಶೇಷ ಸೂಚನೆ:
ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಬರುವ ಪೋಷಕರು 5:00 ಗಂಟೆಗೆ ಸರಿಯಾಗಿ ಬರಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದೆ.








