Friday, June 19, 2026
spot_imgspot_img
spot_imgspot_img

ಕಾರ್ಕಳ : ಫ್ಯಾಕರಿಯಲ್ಲಿ ನೇಣು ಬಿಗಿದು ಉದ್ಯಮಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ : ಉದ್ಯಮದಲ್ಲಿ ತೀವ್ರ ಆರ್ಥಿಕ ನಷ್ಟ ಉಂಟಾಗಿ ಉದ್ಯಮಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

ಹೆರ್ಮುಂಡೆ ಪದ್ಮಾವತಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಅಜೆಕಾರು ನಿವಾಸಿ ನಕುಲ್ ದಾಸ್ ಪೈ (52) ಆತ್ಮಹತ್ಯೆಗೆ ಶರಣಾದ ಉದ್ಯಮಿಯಾಗಿದ್ದಾರೆ. ತನ್ನ ಫ್ಯಾಕರಿಯಲ್ಲಿ ನೇಣು ಬಿಗಿದು ನಕುಲ್ ದಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆರ್ಮುಂಡೆಯಲ್ಲಿರುವ ತಮ್ಮ ಫ್ಯಾಕ್ಟರಿಯ ಹಿಂಭಾಗದಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ವ್ಯವಹಾರದಲ್ಲಿ ಆದ ನಷ್ಟವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!