Wednesday, May 15, 2024
spot_imgspot_img
spot_imgspot_img

ಕಾರ್ಕಳ: ಕಾರುಗಳ ನಡುವೆ ಅಪಘಾತ; ಮಹಿಳೆ ಮೃತ್ಯು..!

- Advertisement -G L Acharya panikkar
- Advertisement -

ಕಾರ್ಕಳ: ಕಾರುಗಳ ನಡುವೆ ಅಪಘಾತ ಉಂಟಾದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಕಾರ್ಕಳದ ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಮರಿಯಾ ಫರ್ನಾಂಡೀಸ್ (60) ಎಂದು ಗುರುತಿಸಲಾಗಿದೆ.

ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಕಾರ್ಕಳ ಕಡೆಯಿಂದ ಬೆಳಣ್ ಕಡೆಗೆ ಸಾಗುತ್ತಿದ್ದ ಕಾರು, ಬೆಳ್ಳಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರಿನ ಬಲ ಬದಿಯ ಡೋರ್ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಅಪಘಾತದ ಪರಿಣಾಮವಾಗಿ ಕಾರಿನಲ್ಲಿದ್ದ ಮರಿಯಾ ಫೆರ್ನಾಂಡೀಸ್ ಗಾಯಗೊಂಡಿದ್ದರು. ಗಾಯಾಳು ಮರಿಯ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!