Wednesday, September 23, 2026
spot_imgspot_img
spot_imgspot_img

ಕಾರ್ಕಳ: ಟೆಂಪೋ – ಸ್ಕೂಟರ್ ಮುಖಾಮುಖಿ ಡಿಕ್ಕಿ; ದೈವ ನರ್ತಕ ಸಾವು

- Advertisement -
- Advertisement -

ಕಾರ್ಕಳ: ಟೆಂಪೋ ಮತ್ತು ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ದೈವ ನರ್ತಕ ಸಾವನ್ನಪ್ಪಿದ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಸಚೇರಿಪೇಟೆಯ ನಿವಾಸಿ ದೈವ ನರ್ತಕ ಗೋಪಾಲಕೃಷ್ಣ (38) ಮೃತಪಟ್ಟವರು. ಈ ಅವಘಡ ಕಾರ್ಕಳ ತಾಲೂಕಿನ ಮುಂಡೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ನಡೆದಿದೆ.

ಮುಂಡೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ತರಕಾರಿ ಸಾಗಾಟದ ಟೆಂಪೊವೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅದರ ಪರಿಣಾಮ ಸ್ಕೂಟರ್ ಸವಾರ ಗೋಪಾಲಕೃಷ್ಣ ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಿನ್ನಿಗೋಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!