Monday, October 19, 2026
spot_imgspot_img
spot_imgspot_img

ಕಾರ್ಕಳ: ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣ; ಆರೋಪಿಯ ಬಂಧನ

- Advertisement -
- Advertisement -

ಕಾರ್ಕಳ: ಅಪರಿಚಿತ ವ್ಯಕ್ತಿಯೋರ್ವ ತಾನು ಸೂಪರ್‌ವೈಸ‌ರ್ ಎಂದು ಹೇಳಿ ನಾಟಕವಾಡಿ ಮನೆಗೆ ಬಂದು ಸಿಸಿ ಕ್ಯಾಮರಾ ಉಂಟಾ ಎಂಬುದರ ಬಗ್ಗೆ ವಿಚಾರಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಓಡಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಕಾರ್ಕಳದ ಮುಳ್ಳಾಡು ಎಳ್ಳಾರೆ ಗ್ರಾಮದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಬೆಳಗಾವಿ ಮೂಲದ ಸುನಿಲ್ ರಮೇಶ್ ಲಮಾಣಿ ಎಂದು ಗುರುತಿಸಲಾಗಿದೆ.

ಎಳ್ಳಾರೆ ಗ್ರಾಮದ ಕುಮುದಾ ಶೆಟ್ಟಿ ತಮ್ಮ ಮನೆಯ ಅಂಗಳದಲ್ಲಿ ಕುಳಿತುಕೊಂಡಿರುವಾಗ ಅಪರಿಚಿತ ವ್ಯಕ್ತಿ ಅವರ ಬಳಿ ಬಂದು “ತಾನು ಕಾರ್ಕಳದ ಸೂಪರ್ ವೈಸರ್ ಎಂದು ಹೇಳಿ ಇಲ್ಲಿ ಹತ್ತಿರ ಮನೆ ಉಂಟಾ, ನಿಮ್ಮ ಮನೆಯಲ್ಲಿ ಸಿಸಿ ಕ್ಯಾಮರಾ ಉಂಟಾ” ಎಂದೆಲ್ಲ ವಿಚಾರಿಸಿದ್ದಾನೆ.

ಸ್ವಲ್ಪ ಸಮಯ ಅಲ್ಲಿಯೇ ಕುಳಿತು ಕುಮುದಾರ ಹತ್ತಿರ ಬಂದು ಅವರ ಕುತ್ತಿಗೆಗೆ ಕೈ ಹಾಕಿ ನೆಲಕ್ಕೆ ದೂಡಿ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ರೋಪ್ ಚೈನನ್ನು ಕಿತ್ತುಕೊಂಡು ಓಡಿದ್ದಾನೆ. ಮಹಿಳೆ ನೆಲಕ್ಕೆ ಬಿದ್ದ ಪರಿಣಾಮ ಅವರಿಗೆ ಗಾಯವಾಗಿದ್ದು ಕಾರ್ಕಳದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆರೋಪಿ ಎಗರಿಸಿದ ಚಿನ್ನದ ಸರದ ಬೆಲೆ 1,75,000ರೂ. ಎಂದು ಅಂದಾಜಿಸಲಾಗಿದೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಚಿನ್ನದ ಸರ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Related news

error: Content is protected !!