Friday, June 5, 2026
spot_imgspot_img
spot_imgspot_img

ಉಪ್ಪಿನಂಗಡಿ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2013ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಶಿವಾಜಿನಗರ ಬೆಂಗಳೂರು ಇಮ್ರಾನ್‌ ಖಾನ್ (36) ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ ನಂ: 140/2013 ಕಲಂ: 354 (ಎ), (ಡಿ) IPC ಪ್ರಕರಣದಲ್ಲಿ ಆರೋಪಿ ಇಮ್ರಾನ್‌ ಖಾನ್ ಎಂಬಾತನು ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು LPC ವಾರೆಂಟ್ ನಂ: 1/2024 ರಂತೆ ವಾರೆಂಟ್ ಹೊರಡಿಸಿತ್ತು.

ಈ ಬಗ್ಗೆ ಆರೋಪಿಯನ್ನು ಬೆಂಗಳೂರು ನಗರದ ಕೆ,ಜಿ‌ ಹಳ್ಳಿ ಎಂಬಲ್ಲಿಂದ 13/9/2025 ರಂದು ದಸ್ತಗಿರಿ‌ ಮಾಡಿ ದಿನಾಂಕ 14/9/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!