Sunday, June 14, 2026
spot_imgspot_img
spot_imgspot_img

ಕಾರ್ಕಳ: ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ..!

- Advertisement -
- Advertisement -

ಕಾರ್ಕಳ: ನವವಿವಾಹಿತೆಯೊಬ್ಬಳು ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ
ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮಂಗಿಲಾರು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹಿರ್ಗಾನ ಗ್ರಾಮದ ಮನೋಜ್ ಆಚಾರ್ಯ ಎಂಬವರ ಪತ್ನಿ ಅಶ್ವಿನಿ (25) ಎಂದು ಗುರುತಿಸಲಾಗಿದೆ.

ಈದು ಗ್ರಾಮದ ಮುಳಿಕಾರು ಎಂಬಲ್ಲಿನ ಅಶ್ವಿನಿಗೆ ಹಿರ್ಗಾನ ಗ್ರಾಮದ ಮನೋಜ್ ಎಂಬವರ ಜತೆ ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾದ್ದು, ಇದೀಗ ನವವಿವಾಹಿತೆ ಅಶ್ವಿನಿ ಸಾವಿನ ಕುರಿತು ಆಕೆಯ ಹೆತ್ತವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಮುಂದುವರೆಸಲಾಗಿದೆ

- Advertisement -

Related news

error: Content is protected !!