Friday, May 3, 2024
spot_imgspot_img
spot_imgspot_img

ಕಾರ್ಕಳ: ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಶೇ. 100 ರಷ್ಟು ಫಲಿತಾಂಶ – ರಾಜ್ಯಕ್ಕೆ ಮೂರನೇ ಸ್ಥಾನದೊಂದಿಗೆ ಸಾನ್ವಿ ರಾವ್

- Advertisement -G L Acharya panikkar
- Advertisement -

ಕಾರ್ಕಳ: ರಾಜ್ಯದೆಲ್ಲೇಡೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಫಲಿತಾಂಶದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ಉಡುಪಿ ಜಿಲ್ಲೆಯ ಗುಣಮಟ್ಟದ ಶಿಕ್ಷಣ ಸಂಸ್ಥೆ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಶೇ. 100 ರಷ್ಟು ಫಲಿತಾಂಶದೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶೇ. 100ರಷ್ಟು ಫಲಿತಾಂಶ ದ ಜೊತೆಗೆ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ರಾವ್ (ಮೂರನೇ ರ್‍ಯಾಂಕ್) , ಭಕ್ತಿ ಕಾಮತ್(ಆರನೇ ರ್‍ಯಾಂಕ್), ಎ.ಎಸ್ ಚಿನ್ಮಯಿ (ಆರನೇ ರಾಂಕ್), ಎ. ಅನನ್ಯ ಜೈನ್ (ಒಂಭತ್ತನೇ ರ್‍ಯಾಂಕ್) ಪಡೆದಿರುತ್ತಾರೆ. ಹಾಗೇ ವಿಜ್ಞಾನ ವಿಭಾಗದಲ್ಲಿ ಸಿಂಚನ ಆರ್‌.ಹೆಚ್ (ಏಳನೇ ರ್‍ಯಾಂಕ್), ಸುಜಿತ್ ಡಿ.ಕೆ (ಏಂಟನೇ ರ್‍ಯಾಂಕ್) ಹಂಸಿನಿ ವಿ. (ಏಂಟನೇ ರ್‍ಯಾಂಕ್) ,ಪ್ರೇಮ್‌ಸಾಗರ್‍ ಪಾಟೀಲ್ (ಹತ್ತನೇ ರ್‍ಯಾಂಕ್), ವರ್ಷ ಹೆಚ್.ವಿ (ಹತ್ತನೇ ರ್‍ಯಾಂಕ್) ಗಳಿಸಿದ್ದಾರೆ.

ಇಂದು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕಾಲೇಜ್ ಎಂದು ಗುರುತಿಸಿಕೊಂಡಿರುವ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಶೈಕ್ಷಣಿಕ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದೆ.

- Advertisement -

Related news

error: Content is protected !!