- Advertisement -
- Advertisement -





ಕಾರ್ಕಳ: ಹೊಸ ಮೊಬೈಲ್ ಕೊಡಿಸಿಲ್ಲ ಎಂದು ನೀರು ನಿಂತಿದ್ದ ಕಲ್ಲು ಕೋರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ನಂದಳಿಕೆ ಗ್ರಾಮದ ನಿವಾಸಿ ಸುರೇಖಾ ಎಂಬುವವರು ಮಗ ಸುಮಂತ್ ದೇವಾಡಿಗ (16) ಎಂದು ಗುರುತಿಸಲಾಗಿದೆ.
ಸುಮಂತ್ ನಿಟ್ಟೆ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಮೊಬೈಲ್ ಹಾಳಾಗಿದ್ದು, ಅದನ್ನು ದುರಸ್ತಿಗೆ ನೀಡಲಾಗಿತ್ತು. ಈತ ಹೊಸ ಮೊಬೈಲ್ ಕೊಡಿಸಬೇಕೆಂದು ಅಮ್ಮನ ಬಳಿ ಹಠ ಹಿಡಿದಿದ್ದ. ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಭರವಸೆ ನೀಡಿದ್ದರು, ಇದರಿಂದ ಸಮಾಧಾನಗೊಳ್ಳದ ಸುಮಂತ್, ನೀರು ನಿಂತಿದ್ದ ಕಲ್ಲು ಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
- Advertisement -








