Wednesday, August 5, 2026
spot_imgspot_img
spot_imgspot_img

ಕಾರ್ಕಳ ಅತ್ಯಾಚಾರ ಪ್ರಕರಣ : ಸಂತ್ರಸ್ತೆ ರಕ್ತದಲ್ಲಿ ಡ್ರಗ್ಸ್ ಪತ್ತೆ; ಆರೋಪಿಗಳ ರಿಪೋರ್ಟ್ ನೆಗೆಟಿವ್- ಎಸ್.ಪಿ. ಡಾ. ಅರುಣ್ ಕೆ. ಮಾಹಿತಿ

- Advertisement -
- Advertisement -

ಉಡುಪಿ: ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿಯ ರಕ್ತದ ಮಾದರಿ ಪರೀಕ್ಷಾ ವರದಿಯ ಮಾಹಿತಿ ಲಭ್ಯವಾಗಿದ್ದು ಈ ಕುರಿತು ಉಡುಪಿ ಎಸ್.ಪಿ. ಡಾ. ಅರುಣ್ ಕೆ. ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯ ರಕ್ತದಲ್ಲಿ ಮಾದಕ ವಸ್ತು ಇರುವ ಬಗ್ಗೆ ಪಾಸಿಟಿವ್ ವರದಿ ಬಂದಿದೆ. ಆದರೆ, ಇಬ್ಬರು ಆರೋಪಿಗಳ ವರದಿ ನೆಗೆಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಎಸ್‌.ಪಿ. ಡಾ. ಅರುಣ್ ಕೆ. ಅವರು, ಪ್ರಕರಣದ 1ನೇ ಆರೋಪಿ ಅಲ್ತಾಫ್ ಹಾಗೂ ಬಿಯರ್ ಬಾಟಲ್ ತಂದುಕೊಟ್ಟ 2ನೇ ಆರೋಪಿ ರಿಚರ್ಡ್ ಬ್ಲಡ್ ಟೆಸ್ಟ್‌ ರಿಪೋರ್ಟ್ ನೆಗೆಟಿವ್ ಬಂದಿದೆ. ಆರೋಪಿ ಅಲ್ತಾಫ್ ವಿಚಾರಣೆ ವೇಳೆ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿದ್ದ. ಇದನ್ನೇ ಸಂತ್ರಸ್ತ ಯುವತಿ ತೆಗೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ಆ ಪೌಡರ್ ಅನ್ನು ನಾವು ಎಫ್ಎಸ್ಎಲ್‌ಗೆ ಕಳಿಸಲಾಗಿದ್ದು, ಯಾವ ಡ್ರಗ್ಸ್ ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಕರಣದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ. ಈ ಡ್ರಗ್ ಅನ್ನು ಎಲ್ಲಿಂದ : 146/24 0০. 8(c), 22(b) NDPS Act, Sec. 3(5) BNS ನಲ್ಲಿ ಪ್ರಕರಣ ದಾಖಲಾಗಿದೆ. ಡ್ರಗ್ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ, ಪೂರ್ಣ ತನಿಖೆ ಮಾಡಲಾಗುವುದು ಸಂತ್ರಸ್ತೆಯು ಜಡ್ಜ್ ಮುಂದೆ ಹೇಳಿಕೆ ಕೊಡಲಿದ್ದು, ವೈದ್ಯಕೀಯ ಪರೀಕ್ಷೆ ಆದ ನಂತರ ಈ ಪ್ರಕ್ರಿಯೆ ನಡೆಯಲಿದೆ. ಆದಷ್ಟು ಬೇಗನೆ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

- Advertisement -

Related news

error: Content is protected !!