Thursday, July 23, 2026
spot_imgspot_img
spot_imgspot_img

ಕುಷಿ ವಿಟ್ಲ ರವರಿಗೆ ಕರ್ನಾಟಕ ರಾಜ್ಯಮಟ್ಟದ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ

- Advertisement -
- Advertisement -

ಕರ್ನಾಟಕ ಜನಸ್ಪಂದನ ಟ್ರಸ್ಟ್ (ರಿ) ಕರ್ನಾಟಕ ರಾಜ್ಯ ಸಂಸ್ಥೆ ಟಿ.ದಾಸರಹಳ್ಳಿ ಬೆಂಗಳೂರು, ಹನುಮಂತಪ್ಪ ಎಸ್ ಮೇಡೆಗಾರ ರಾಜ್ಯಾಧ್ಯಕ್ಷರು ಇವರು ಹಮ್ಮಿಕೊಂಡ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜು.23 ರಂದು ಶ್ರೀ ಸಾಯಿ ಕಲ್ಯಾಣ ಮಂಟಪ ಬಾಗಲಗುಂಟೆ ಬೆಂಗಳೂರಲ್ಲಿ ನಡೆಯಿತು.

ಸಂಗೀತ ಮತ್ತು ನಟನೆ ಕ್ಷೇತ್ರದಲ್ಲಿ ಸಾಧನೆಗೈದ ಕುಷಿ ವಿಟ್ಲ ಇವರಿಗೆ ರಾಜ್ಯಮಟ್ಟದ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಸೂತಿ ವಿಜಯಪುರದ ಶ್ರೀ ಪರಮಪೂಜ್ಯ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿ ಇವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಶಾಸಕ ಎಸ್ ಮುನಿರಾಜು , ಶಿಕಾರಿಪುರ ಕ್ಷೇತ್ರದ ಬಿ,ವೈ ವಿಜಯೇಂದ್ರ, ವೈಬಿ ಎಚ್ ಜಯದೇವ ಕನ್ನಡ ಜನಪದ ಪರಿಷತ್ತು ಅಧ್ಯಕ್ಷ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಇವರ ಸಮ್ಮುಖದಲ್ಲಿ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

- Advertisement -

Related news

error: Content is protected !!