Tuesday, April 16, 2024
spot_imgspot_img
spot_imgspot_img

ಕರೋಡ್​​ಪತಿಯಲ್ಲಿ ಐಪಿಎಸ್​ ಆಫೀಸರ್​ ಮೋಹಿತ​ ಶರ್ಮಾ ಗೆ ಒಂದು ಕೋಟಿ ರೂಪಾಯಿ

- Advertisement -G L Acharya panikkar
- Advertisement -

ದೆಹಲಿ(ನ.14): ಹಿಂದಿಯ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಒಂದಾದ ಕೌನ್​ ಬನೇಗಾ ಕರೋಡ್​​ಪತಿಯಲ್ಲಿ ಐಪಿಎಸ್​ ಆಫೀಸರ್​ ಮೋಹಿತ​ ಶರ್ಮಾ ಎಂಬವರು ಒಂದು ಕೋಟಿ ರೂಪಾಯಿ ಬಹುಮಾನ ಗಳಿಸಿದ್ದಾರೆ.12ನೇ ಆವೃತ್ತಿಯ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಕೋಟಿ ಗಳಿಸಿದ ಎರಡನೇ ಕಂಟೆಸ್ಟೆಂಟ್​ ಇವರಾಗಿದ್ದಾರೆ.

ಈ ಮೊದಲು ಶೋನಲ್ಲಿ ಕೋಟಿ ಗಳಿಸಿದ್ದವರು ದೆಹಲಿಯ ನಾಝಿಯಾ ನಸೀಂ. ಐಪಿಎಸ್​ ಅಧಿಕಾರಿ ಮೋಹಿತ​ ಶರ್ಮಾ ಕೂಡ ಈಗ ಕೋಟಿ ಬಹುಮಾನ ಗಳಿಸುವ  ಮೂಲಕ ಇವರಿಬ್ಬರೂ 12ನೇ ಸೀಜನ್​​​ನಲ್ಲಿ ಅತೀ ದೊಡ್ಡ ಮೊತ್ತದ ಬಹುಮಾನ ಗಳಿಸಿದ ಮಹಿಳೆಯರು ಎನಿಸಿಕೊಂಡಿದ್ದಾರೆ.ಮೋಹಿತ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಒಂದು ಕೋಟಿ ಬಹುಮಾನ ತಮ್ಮದಾಗಿಸಿಕೊಳ್ಳುವುದನ್ನ ಕಾರ್ಯಕ್ರಮದ ಪ್ರೋಮೋದಲ್ಲಿ ತೋರಿಸಲಾಗಿದೆ.

ಮೋಹಿತ ಅವರು ಪ್ರಶ್ನೆಗಳಿಗೆ ಉತ್ತರಿಸುವ ಸಂಚಿಕೆ ನವೆಂಬರ್​ 17ಕ್ಕೆ ಪ್ರಸಾರವಾಗಲಿದೆ. ಹಾಗೇ ಮೋಹಿತ ಅವರು 7 ಕೋಟಿ ರೂಪಾಯಿ ಮೊತ್ತದ ಜಾಕ್​ಪಾಟ್​ ಪ್ರಶ್ನೆಯನ್ನ ಕೂಡ ಎದುರಿಸಿದ್ದಾರೆ. ಆದ್ರೆ ಇದ್ರಲ್ಲಿ ಅವರು ವಿಜೇತರಾಗ್ತಾರಾ ಇಲ್ವಾ ಅನ್ನೋದನ್ನ ನವೆಂಬರ್​ 17ರ ಸಂಚಿಕೆಯಲ್ಲಿ ಕಾದುನೋಡಬೇಕಿದೆ.

- Advertisement -

Related news

error: Content is protected !!