Tuesday, April 30, 2024
spot_imgspot_img
spot_imgspot_img

ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ, ಅವಿರೋಧ ಆಯ್ಕೆ ಮೂಲಕ ಇತಿಹಾಸ ಸೃಷ್ಟಿಸಿದ ಕರೋಪಾಡಿ ಗ್ರಾಮ; ಅಧ್ಯಕ್ಷೆ ಸೂರ್ಯಕಾಂತಿ, ಉಪಾಧ್ಯಕ್ಷ ಅನ್ವರ್ ಕರೋಪಾಡಿ ಆಯ್ಕೆ

- Advertisement -G L Acharya panikkar
- Advertisement -

ಬಂಟ್ವಾಳ ತಾಲೂಕಿನ ಗಡಿಭಾಗದ ಕರೋಪಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿರೋಧ ಪಕ್ಷ ನಾಮಪತ್ರ ಸಲ್ಲಿಸದ ಹಿನ್ನೆಲೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ ಸೂರ್ಯಕಾಂತಿ ಹಾಗೂ ಉಪಾದ್ಯಕ್ಷರಾಗಿ ನಾಮಪತ್ರ ಸಲ್ಲಿಸಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನ್ವರ್ ಕರೋಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಬೆಂಬಲಿಗರು ಆಯ್ಕೆಯಾಗಿದ್ದರು. ಕಳೆದ ಅವಧಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅನ್ವರ್ ಕರೋಪಾಡಿ ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ಕೆಲಸ ಮಾಡುವ ಮೂಲಕ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಅಲ್ಲದೇ ಜಾತಿಮತ ನೋಡದೆ ಜನರಿಗೆ ಸುಲಭವಾಗಿ ತಲುಪುವಲ್ಲಿ ಅನ್ವರ್ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿಹೆಚ್ಚು ಲೀಡ್ ನೀಡುವ ಮೂಲಕ ಕರೋಪಾಡಿ ಗ್ರಾಮದ ಮತದಾರರು ಪಕ್ಷ ನಿಷ್ಟೆಗೆ ಸಾಕ್ಷಿಯಾಗಿದ್ದಾರೆ.

ತನ್ನ ತಂದೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಉಸ್ಮಾನ್ ಕರೋಪಾಡಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಲೀಲ್ ಕರೋಪಾಡಿ ಹಾದಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಧಾರ್ಮಿಕ, ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡ ಕುಟುಂಬಕ್ಕೆ ಇತರ ಸದಸ್ಯರ ಅವಿರೋಧ ಬೆಂಬಲದಿಂದ ಈ ಭಾರಿ ಮತ್ತೆ ಉಪಾಧ್ಯಕ್ಷ ಸ್ಥಾನಕ್ಕೆ ಆರ್ಹರಾಗಿ ಚುನಾಯಿತರಾಗಿದ್ದಾರೆ. ಅನ್ವರ್ ಕರೋಪಾಡಿ ಅವರಿಗೂ ಅಧ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತಿ ಅವರಿಗೂ ಕಳೆದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಾ ಜಿಲ್ಲೆಯಲ್ಲಿ ಮಾದರಿ ಗ್ರಾಮವಾಗಿ ಕರೋಪಾಡಿ ಗ್ರಾಮ ಅಭಿವೃದ್ಧಿಯಾಗಲಿ ಎಂದು ವಲಯ ಕಾಂಗ್ರೆಸ್ ಅಭಿಮಾನಿ ಬಳಗ ಹಾರೈಸಿದರು.

- Advertisement -

Related news

error: Content is protected !!