Friday, June 5, 2026
spot_imgspot_img
spot_imgspot_img

ಕಾಸರಗೋಡು: ರೈಲು ಹಳಿಯಲ್ಲಿ ಆಟೋ ಚಾಲಕನ ಮೃತದೇಹ ಪತ್ತೆ

- Advertisement -
- Advertisement -

ಕಾಸರಗೋಡು: ಪೆರ್ಲ ಕಾಟುಕುಕ್ಕೆ ನಿವಾಸಿ, ಆಟೋ ಚಾಲಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಕಾಟುಕುಕ್ಕೆ ಸೂರ್ಡೆಲು ನಿವಾಸಿ ತಾರಾನಾಥ ರೈ (46) ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ತಲೆ ತುಂಡರಿಸಲ್ಪಟ್ಟ ಸ್ಥಿತಿಯಲ್ಲಿ ರೈಲು ಕುಂಬಳೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇವರ ಬಳಿ ಇದ್ದ ಎಟಿಎಂ ಕಾರ್ಡ್ ನ ನೆರವಿನಿಂದ ಕುಂಬಳೆ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕುಂಬಳೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!