- Advertisement -
- Advertisement -



ಕಾಸರಗೋಡು: ನಿಯಂತ್ರಣ ತಪ್ಪಿದ ಬೈಕ್ ಟೆಲಿಪೋನ್ ಜಂಕ್ಷನ್ ಬಾಕ್ಸ್‌ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ಘಟನೆ ಕಾಸರಗೋಡು ತ್ರಿಕ್ಕರಿಪುರ ದಲ್ಲಿ ನಡೆದಿದೆ .
ಮೃತಪಟ್ಟವರನ್ನು ಸೌತ್ ತ್ರಿಕ್ಕರಿಪುರ ಮಟ್ಟಮ್ಮಲ್ ನ ವಿ.ಪಿ . ಎಂ ಮುಹಮ್ಮದ್ ಸುಹೈಲ್ (27) ಮತ್ತು ಪಯ್ಯನೂರು ಕೆ. ಶಹೀದ್ (27) ಎಂದು ಗುರುತಿಸಲಾಗಿದೆ.
ಪಯ್ಯನ್ನೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟೆಲಿಪೋನ್ ಜಂಕ್ಷನ್ ಬಾಕ್ಸ್ ಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆ ಯ ಶವಾಗಾರದಲ್ಲಿರಿಸಲಾಗಿದೆ.
- Advertisement -