Sunday, June 7, 2026
spot_imgspot_img
spot_imgspot_img

ಕಾಸರಗೋಡು: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ; ವಿದ್ಯಾರ್ಥಿ ಮೃತ್ಯು..!

- Advertisement -
- Advertisement -

ಕಾಸರಗೋಡು: ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿ ಬೈಕ್ ಅಪಘಾತದಿಂದ ಮೃತಪಟ್ಟ ಘಟನೆ ಚೆರ್ಕಳದಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿ ಏತನೀರು ಕಳರಿಯ ಅರವಿಂದಾಕ್ಷನ್ ಮತ್ತು ಸುಚಿತ್ರ ದಂಪತಿಯ ಪುತ್ರ ಅಂಶಿತ್ (6) ಎಂದು ಗುರುತಿಸಲಾಗಿದೆ.

ಪಾಟಿತ್ತೋಡ್ ಮತ್ತು ನೆಲ್ಲಿಕಟಾ ನಡುವೆ ಅಪಘಾತ ಸಂಭವಿಸಿದೆ. ಬೈಕ್ ತುಂಬಾ ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬಂದು ತಾಯಿ ಮತ್ತು ಮಗನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಚೆಂಗಳ ಇ.ಕೆ.ನಾಯನಾರ್ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ತಾಯಿ ಸುಚಿತ್ರಾ ಆಸ್ಪತ್ರೆಯಲ್ಲಿದ್ದಾರೆ, ಮಗು ಮೃತಪಟ್ಟಿದ್ದಾನೆ. ಪೆರಿಯಡುಕ್ಕ ಪೀಸ್ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ. ಘಟನೆ ಸಂಬಂಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ಕಾರಣವಾದ ಬುಲೆಟ್ ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Related news

error: Content is protected !!