Monday, June 30, 2025
spot_imgspot_img
spot_imgspot_img

ಕಾಸರಗೋಡು: ಪುರುಷ ಹಾಗೂ ಮಹಿಳೆಯ ಮೃತದೇಹ ವಸತಿಗೃಹದಲ್ಲಿ ಪತ್ತೆ..!

- Advertisement -
- Advertisement -

ಕಾಸರಗೋಡು: ಪುರುಷ ಮತ್ತು ಮಹಿಳೆಯ ಮೃತದೇಹ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡುನಲ್ಲಿ ನಡೆದಿದೆ . ಮಹಿಳೆಯನ್ನು ಕೊಲೆಗೈದು ಈತ ಆತ್ಮಹತ್ಯೆ ಗೈದಿರಬಹುದು ಎಂದು ಶಂಕಿಸಲಾಗಿದೆ.

ಮೃತಪಟ್ಟವರನ್ನು ನೆಲ್ಲಿಕಟ್ಟೆ ಯ ಫಾತಿಮಾ (42) ಹಾಗೂ ಚೆಂಗಳ ರಹಮತ್ ನಗರದ ಕೆ . ಹುಸೈನಾರ್ ( 33) ಎಂದು ಗುರುತಿಸಲಾಗಿದೆ.

ಕಾಸರಗೋಡು ನಗರದ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ . ಕಾಸರಗೋಡು ಹಾಗೂ ಹೊಸದುರ್ಗ ಠಾಣಾ ಪೊಲೀಸರು ಮಹಜರು ನಡೆಸಿದ್ದು , ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗರದಲ್ಲಿರಿಸಲಾಗಿದೆ.

ಫಾತಿಮಾಳು ಪತಿ ಮತ್ತು ಮಕ್ಕಳನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಹುಸೈನಾರ್ ಜತೆ ವಾಸವಾಗಿದ್ದಳು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ . ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!