Thursday, June 18, 2026
spot_imgspot_img
spot_imgspot_img

ಕುಂಬಳೆ: ಬಸ್ಸಿನಲ್ಲಿ ಮಗುವನ್ನು ಮರೆತು ಇಳಿದ ದಂಪತಿ..!!

- Advertisement -
- Advertisement -

ಕುಂಬಳೆ: ಮೂವರು ಮಕ್ಕಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಒಂದು ಮಗುವನ್ನು ಮರೆತು ಬಸ್‌ನಲ್ಲಿ ಬಿಟ್ಟು ಇಳಿದು ಮನೆಗೆ ತೆರಳಿದ್ದು, ಸಹ ಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಮಗು ಹೆತ್ತವರ ಮಡಿಲು ಸೇರಿದ ಘಟನೆ ರವಿವಾರ ರಾತ್ರಿ ನಡೆದಿದೆ.

ಉಪ್ಪಳದಿಂದ ಮೂವರು ಮಕ್ಕಳೊಂದಿಗೆ ಬಸ್ಸೇರಿದ ದಂಪತಿ ಬಂದ್ಯೋಡ್ ಗೆ ಟಿಕೆಟ್ ಪಡೆದಿದ್ದರು. ಬಂದ್ಯೋಡ್ ತಲುಪಿದಾಗ ಪತಿ ಒಂದು ಮಗುವಿನೊಂದಿಗೆ ಒಂದು ಬಾಗಿಲಲ್ಲಿ ಇಳಿದರೆ, ತಾಯಿ ಇನ್ನೊಂದು ಮಗುವಿನೊಂದಿಗೆ ಮತ್ತೊಂದು ಬಾಗಿಲಲ್ಲಿ ಇಳಿದರು. ಇನ್ನೊಂದು ಸೀಟಿನಲ್ಲಿ ಕುಳಿತಿದ್ದ ಮತ್ತೊಂದು ಮಗು ಅಲ್ಲೇ ಉಳಿಯಿತು.

ಆ ಸೀಟಿನಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದು, ಬಸ್‌ ನಲ್ಲಿ ಮಗು ಮಾತ್ರ ಉಳಿದಿರುವುದು ಅರಿತು, ನಂತರ ಬಸ್ಸನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಈ ವಿಷಯ ವೈರಲ್ ಆಗುತ್ತಿದ್ದಂತೆ ಮಗುವಿನ ಹೆತ್ತವರು ಠಾಣೆಗೆ ಬಂದರು. ಮಗುವನ್ನು ಅವರಿಗೆ ಹಸ್ತಾಂತರಿಸಲಾಯಿತು

- Advertisement -

Related news

error: Content is protected !!