Wednesday, May 15, 2024
spot_imgspot_img
spot_imgspot_img

ಕಾಸರಗೋಡು : ಸ್ಫೊಟಕ ಪತ್ತೆ ಪ್ರಕರಣ; ಆರೋಪಿ ನ್ಯಾಯಾಂಗ ಬಂಧನ

- Advertisement -G L Acharya panikkar
- Advertisement -

ಕಾಸರಗೋಡು: ಅಬಕಾರಿ ಮತ್ತು ಆದೂರು ಪೊಲೀಸರು ಸೇರಿ ನಡೆಸಿದ ಕಾರ್ಯಚರಣೆಯಲ್ಲಿ ಬೃಹತ್ ಪ್ರಮಾಣ ಸ್ಫೊಟಕವೊಂದು ಮುಳಿಯಾರು ಪಂಚಾಯತ್ ನ ಕೆಟ್ಟುಂಗಲ್‌ನಲ್ಲಿ ಪತ್ತೆಯಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್ ಮುಸ್ತಫಾ (42) ಎಂದು ಗುರುತಿಸಲಾಗಿದೆ. ತನಿಖೆ ನಡೆಸಿದಾಗ ಕಾರು ಮತ್ತು ಈತನ ಮನೆಯಲ್ಲಿ 2800 ಜಿಲಸ್ಟಿನ್ ಸ್ಟಿಕ್, ದಿಟರ್ನೆಟರ್‍ ಸೇರಿದಂತೆ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳು ಪತ್ತೆಯಾಗಿದೆ. ಜಂಟಿ ಕಾರ್ಯ ನಡೆಸಿದ ಪೊಲೀಸರು ಸ್ಫೋಟಕ ವಸ್ತುವನ್ನು ಪತ್ತೆಹಚ್ಚಿ ಆ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಯನ್ನು ಇದೀಗ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ. ನ್ಯಾಯಾಲಯವು ಆತನಿಗೆ ನ್ಯಾಯಂಗ ಬಂಧನ ವಿಧಿಸಿದೆ. ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನೀಡಿರುವ ಹೇಳಿಕೆಗಳ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು , ಸಮಗ್ರ ತನಿಖೆಗೆ ತೀರ್ಮಾನಿಸಿದ್ದಾರೆ.

- Advertisement -

Related news

error: Content is protected !!