Tuesday, June 9, 2026
spot_imgspot_img
spot_imgspot_img

ಕಾಸರಗೋಡು : ಲ್ಯಾಬ್ ಟೆಕ್ನಿಷಿಯನ್ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

- Advertisement -
- Advertisement -

ಕಾಸರಗೋಡು : ಲ್ಯಾಬ್ ಟೆಕ್ನಿಷಿಯನ್ ಯುವತಿ ಮನೆಯೊಳಗೆ ಶವವಾಗಿ ಪತ್ತೆಯಾದ ಘಟನೆ ಕಾಸರಗೋಡಿನ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಟತುಕ್ಕ ಅನ್ನಪಾಡಿ ಚಮಕೊಚ್ಚಿಯ ದಿ. ಬುದ್ಧ ನಾಯ್ಕ್-ಲೀಲಾ ದಂಪತಿಯ ಪುತ್ರಿ ಎ.ಬಿ.ದಿವ್ಯಾ (21) ಮೃತರು. ಬಂಡತುಕದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದೂರು ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಯವಕನೊಬ್ಬನ ಕಿರುಕುಳಕ್ಕೆ ಆತ್ಮಹತ್ಯೆ
ದಿವ್ಯಾ ಮಂಗಳವಾರ ರಾತ್ರಿ ಲ್ಯಾಬ್ ನಲ್ಲಿ ಕೆಲಸ ಮುಗಿಸಿ ಬುಧವಾರ ಬೆಳಿಗ್ಗೆ ಮನೆಗೆ ಬಂದಿದ್ದರು. ಸ್ಥಳದಲ್ಲಿ ದಿವ್ಯಾಳ ಆತ್ಮಹತ್ಯೆ ಪತ್ರ ಲಭಿಸಿದ್ದು ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಯುವಕನೋರ್ವನ ಕೇಂದ್ರೀಕರಿಸಿ ಆದೂರು ಪೊಲೀಸರು ತನಿಖೆ ಅರಂಭಿಸಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!